ದಕ್ಷಿಣ ಭಾರತೀಯ ಸಿನಿರಂಗದ ಖ್ಯಾತ ನಟಿ ಕಾಜಲ್ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಅಕ್ಬೋಬರ್ 30 ರಂದು ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳೆಯ ಉದ್ಯಮಿ ಗೌತಮ್ ಜೊತೆ ಮದುವೆಯಾಗುತ್ತಿದ್ದಾರೆ. ಕೊರೊನಾ ವೈರಸ್ ಕಾಟದಿಂದ ಸರಳವಾಗಿ ಮದುವೆಯಾಗುತ್ತಿರುವ ಕಾಜಲ್, ಈಗಾಗಲೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.
ಸದ್ಯ ನಟಿ ಕಾಜಲ್ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ರಿವೀಲ್ ಮಾಡಿದ್ದಾರೆ. ಕಾಜಲ್ ಕೈ ಬೆರಳಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಜಲ್ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದಾರೆ. ಉಂಗುರ ತೋರಿಸಿ ಸೂಪರ್ ಎಂದು ಆಕ್ಷನ್ ಮಾಡಿ ಹೇಳಿದ್ದಾರೆ. ಇದುವರೆಗೂ ಕಾಜಲ್ ನಿಶ್ಚಿತಾರ್ಥದ ಉಂಗುರ ರಿವೀಲ್ ಆಗಿರಲಿಲ್ಲ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಅಕ್ಟೋಬರ್ 30ರಂದು ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೀರಾ ಖಾಸಗಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರರು ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ.