Saturday, May 15, 2021
No menu items!
Home Latest 36 ವರ್ಷಗಳಿಂದ ಒಂಟಿಯಾಗಿ ಪಾಕಿಸ್ತಾನದಲ್ಲಿದ್ದ ಆನೆಗೆ ಈಗ ಸಹಪಾಠಿ ಸಿಕ್ಕಿದೆ

36 ವರ್ಷಗಳಿಂದ ಒಂಟಿಯಾಗಿ ಪಾಕಿಸ್ತಾನದಲ್ಲಿದ್ದ ಆನೆಗೆ ಈಗ ಸಹಪಾಠಿ ಸಿಕ್ಕಿದೆ

ಕಾಂಬೋಡಿಯಾ: ಪಾಕಿಸ್ತಾನದ ಮೃಗಾಲಯದಲ್ಲಿ ಕಳೆದ ಕೆಲ ವರ್ಷಗಳಿಂದ ಏಕಾಂಗಿಯಾಗಿದ್ದ ಆನೆ ಕವಾನ್ ಕಾಂಬೋಡಿಯಾದಲ್ಲಿ ಹೊಸ ಬದುಕುಕಟ್ಟಿಕೊಂಡಿದೆ. ಆ ಮೂಲಕ ಹಲವು ವರ್ಷಗಳ ಏಕಾಂಗಿ ಜೀವನದಿಂದ ಹೊರ ಬರುವ ಪ್ರಯತ್ನದತ್ತ ಅಡಿ ಇಟ್ಟಿದೆ.

ಕಾವನ್ ಆನೆ ಇದೀಗ ಕಾಂಬೋಡಿಯಾದ ಅಭಯಾರಣ್ಯದಲಲ್ಲಿ ಹೊಸ ಜೀವನವನ್ನ ಆರಂಭಿಸಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೊಂದು ಆನೆಯ ಜೊತೆ ಕಾಲ ಕಳೆದಿದೆ.

36 ವರ್ಷದ ಆನೆ ಇಸ್ಲಾಮಾಬಾದ್ನ ಮೃಗಾಲಯದಲ್ಲಿದ್ದ ಏಕೈಕ ಏಷಿಯನ್ ಆನೆಯಾಗಿತ್ತು. ಇದರ ಏಕಾಂಗಿತನ ನೋಡಿ ಮರುಗಿದ ಅಮೆರಿಕದ ಗಾಯಕಿ ಚೆರ್ ಸಾಮಾಜಿಕ ಮಾಧ್ಯಮ ಹಾಗೂ ಪ್ರಾಣಿ ಪ್ರಿಯರ ನೆರವಿನಿಂದ ಅಭಿಯಾನವನ್ನ ನಡೆಸಿ ಆನೆಯನ್ನ ಕಾಂಬೋಡಿಯಾ ಅಭಯಾರಣ್ಯಕ್ಕೆ ವರ್ಗಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಕವಾನ್ ನ ಒಂಟಿ ಬದುಕನ್ನು ಬದಲಾಯಿಸಿದ ಕೀರ್ತಿ ಚೇರ್ ಪಾಲಿಗೆ ಸಂದಿದೆ. ಹಿಂದೊಮ್ಮೆ ಚೇರ್, ಪಾಕಿಸ್ಥಾನದ ಇಸ್ಲಾಮಾಬಾದ್ ನಲ್ಲಿದ್ದ ಪ್ರಾಣಿಸಂಗ್ರಹಾಲಯಕ್ಕೆ ತೆರೆಳಿದ್ದ ವೇಳೆ ಕವಾನ್ ಆನೆಯ ಏಕಾಂಗಿ ದಯನೀಯ ಬದುಕನ್ನು ಕಂಡಿದ್ದರು. ಆ ಬಳಿಕ ಆನೆಯ ಬಿಡುಗಡೆ ಸಲುವಾಗಿ ಪ್ರತಿಜ್ಞೆ ಮಾಡಿದ್ದ ಚೇರ್ , ಅಲ್ಲಿಂದೀಚೆಗೆ ಕವಾನ್ ಬಿಡುಗಡೆ ಸಲುವಾಗಿ ಹಲವು ಗೀತೆ ಹಾಡುಗಳನ್ನು ರಚನೆ ಮಾಡಿ ಹಾಡಿ ಜಗತ್ತಿನಾದ್ಯತಂತ ಜಾಗೃತಿ ಮೂಡಿಸಿದ್ದರು.

ಇದರ ಪರಿಣಾಮವಾಗಿ ನಿರ್ವಹಣೆ ಸಮಸ್ಯೆಯನ್ನು ಒಪ್ಪಿಕೊಂಡ ಪಾಕಿಸ್ತಾನ ಕವಾನ್ ಅನ್ನು ಕಾಂಬೋಡಿಯಾಗೆ ವರ್ಗಾವಣೆ ಮಾಡಲು ಒಪ್ಪಿಕೊಂಡಿತ್ತು. ಇದೀಗ ಆನೆ ನೆಮ್ಮದಿಯಾಗಿ ಮತ್ತೊಂದು ಆನೆಯ ಜೊತೆ ಜೀವನ ನಡೆಸುತ್ತಿದೆ. ಕುಲೆನ್ ಪ್ರಾಮ್ ಟೆಪ್ ವನ್ಯಜೀವಿ ಅಭಯಾರಣ್ಯದಲ್ಲಿರುವ ಕಾವನ್ ತನ್ನ ಸೊಂಡಿಲಿನಿಂದ ಮತ್ತೊಂದು ಆನೆಯ ಸೊಂಡಿಲನ್ನ ಸ್ಪರ್ಶಿಸಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments