Friday, May 14, 2021
No menu items!
Home Latest ಚೀನಾ, ನೇಪಾಳ ಜಂಟಿ ಸಮೀಕ್ಷೆ; ಇಲ್ಲಿದೆ ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರದ ಉತ್ತರ

ಚೀನಾ, ನೇಪಾಳ ಜಂಟಿ ಸಮೀಕ್ಷೆ; ಇಲ್ಲಿದೆ ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರದ ಉತ್ತರ

ನವದೆಹಲಿ: 2015ರಲ್ಲಿ ಸಂಭವಿಸಿದ ಭೂಕಂಪದ ನಂತರ 8,848 ಮೀಟರ್ ಎತ್ತರವು ನಿಜವಾದ ಉದ್ದವಲ್ಲ ಎಂದು ತಜ್ಞರು ಶಂಕಿಸಿದ ನಂತರ, ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ನ ಎತ್ತರವನ್ನು ಚೀನಾ ಮತ್ತು ನೇಪಾಳ ಜಂಟಿಯಾಗಿ ಅಳೆದಿದ್ದು ಈ ಕುರಿತು ಮಾಹಿತಿ ಬಿಡುಗಡೆ ಮಾಡಿವೆ.

ಹೊಸದಾಗಿ ಎತ್ತರವನ್ನು ಅಳೆದಾಗ 8,848.86 ಮೀಟರ್ ಕಂಡುಬಂದಿದೆ ಎಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್​ ಗ್ಯಾವಲಿ ಹೇಳಿದ್ದಾರೆ. ಇದು ಭಾರತದ ಸರ್ವೇ ಆಫ್ ಇಂಡಿಯಾ 1954ರಲ್ಲಿ ಅಳೆದಾಗ ಸಿಕ್ಕ ಅಳತೆಗಿಂತ 86 ಸೆಂಟಿಮೀಟರ್ ಹೆಚ್ಚಾಗಿದೆ.

ಚೀನಾದ ಈ ಹಿಂದಿನ ಅಳತೆಯ ಪ್ರಕಾರ ಮೌಂಟ್ ಎವರೆಸ್ಟ್​ನ ಎತ್ತರ 8,844.43 ಮೀಟರ್ ಆಗಿತ್ತು. ಚೀನಾದ ಸರ್ವೇಯರ್​ಗಳು ಅಳತೆ ತೆಗೆದುಕೊಳ್ಳುವುದಕ್ಕಾಗಿ ಮೌಂಟ್ ಎವರೆಸ್ಟ್ ಅನ್ನು ಆರು ಬಾರಿ ಏರಿದ್ದರು. 1975ರಲ್ಲಿ ಮತ್ತು 2005ರಲ್ಲಿ ಅನುಕ್ರಮವಾಗಿ 8,848.13 ಮತ್ತು 8,844.43 ಮೀಟರ್ ಎತ್ತರವೆಂದು ಘೋಷಿಸಿದ್ದರು.

ಸರ್ವೆ ಆಫ್ ಇಂಡಿಯಾ 1954ರಲ್ಲಿ ನಡೆಸಿದ ಮಾಪನದ ಪ್ರಕಾರ ಮೌಂಟ್ ಎವರೆಸ್ಟ್ ನ ಎತ್ತರ 8,848 ಮೀಟರ್ ಆಗಿತ್ತು. ಇದೀಗ ಹೊಸ ಸರ್ವೆ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಆಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments