ಲಂಡನ್: ಪ್ರಪಂಚದಾದ್ಯಂತ ಮನೆಮಾತಾಗಿದ್ದ ಪತ್ತೇದಾರಿ ಸಿನಿಮಾ ಲೋಕದ ಮೊದಲ ಜೇಮ್ಸ್ ಬಾಂಡ್ ಸಿಯಾನ್ ಕ್ಯಾನರಿ(90) ಇಂದು ನಿಧನರಾಗಿದ್ದಾರೆ.
ಸಿಯಾನ್ ಕ್ಯಾನರಿ ನಟಿಸಿದ್ರ ಡಾ. ನಂ(1962) , ರಷ್ಯಾ ವಿತ್ ಲವ್(1963), ಗೋಲ್ಡ್ ಫಿಂಗರ್(1964), ಥಂಡರ್ಬಾಲ್ (1965), ಯು ಓನ್ಲಿ ಲೈವ್ ಟೈಸ್(1967),ಡೈಮಂಡ್ಸ್ ಆರ್ ಫಾರ್ ಎವರ್, (1971), ನೆವರ್ ಸೆ ನೆವರ್ ಅಗೇನ್ (1983) ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದವು.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೇರಿದಂತೆ ಎರಡು ಬಾರಿ ಬಾಪ್ಟಾ ಪ್ರಶಸ್ತಿ ಮೂರು ಬಾರಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಇವರ ನಟನಾ ಸಾಮಾರ್ಥ್ಯ ಕ್ಕೆ ಸಾಕ್ಷಿ ನೀಡಿವೆ.
ಆಗಸ್ಟ್ 25 – 1930 ರಂದು ಎಡಿನ್ಬರ್ಗ್ ನ ಕೊಳಚೆ ಪ್ರದೇಶದಲ್ಲಿ ಜನಿಸಿದ ಸಿಯಾನ್ ಕ್ಯಾನರಿ ಹಲವು ಕಡೆ ಕಾರ್ಮಿಕರಾಗಿ ಕೆಲಸ ಮಾಡಿ 1950 ರ ನಂತರ ಮಾಡೆಲ್ ಆಗಿ ಗುರುತಿಸಿಕೊಂಡರು. ತದನಂತರ ಬೆಳ್ಳಿ ಪರದೆಗೆ ಕಾಲಿಟ್ಟ ಕ್ಯಾನರಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.