ಮೈಸೂರು : ಪ್ರತಿ ವರ್ಷ ಈ ದಿನ ಅಂದ್ರೆ ಜನತೆಗೆ ಎಲ್ಲಿಲ್ಲದ ಸಂಭ್ರಮ. ಲಕ್ಷಾಂತರ ಮಂದಿ ಇಂದು ಮೈಸೂರಿನಲ್ಲಿ ನೆಲೆಸುತ್ತಿದ್ದರು. ಚಾಮುಂಡಿ ತಾಯಿಯ ಜಂಬೂ ಸವಾರಿ ನೋಡಿ ಸಂತಸ ಪಡುತ್ತಿದ್ದರು. ಆದ್ರೆ ಈ ವರ್ಷ ಕೊರೊನಾ ಎಂಬ ಮಹಾಮಾರಿ ಈ ಎಲ್ಲಾ ಸಂತೋಷವನ್ನು ಕಿತ್ತುಕೊಂಡು ಬಿಟ್ಟಿದೆ.
ಇಂದು ನವರಾತ್ರಿಯ ಕಡೆ ದಿನ ಮೈಸೂರು ಅರಮನೆಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಅದಕ್ಕೆ ಗಜಪಡೆಯನ್ನ ಅಲಂಕಾರ ಮಾಡಲಾಗಿದೆ.
ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದ ದಸರಾ ಜಂಬೂಸವಾರಿಯನ್ನ ಈ ಬಾರಿ ಕೇವಲ 300 ಜನರು ವೀಕ್ಷಿಸಲು ಮಾತ್ರ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ ಪ್ರತಿ ವರ್ಷ ಮೈಸೂರಿನ ರಸ್ತೆಗಳಲ್ಲಿ ಸಾಗುತ್ತಿದ್ದ ಜಂಬೂ ಸವಾರಿ ಈ ಬಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿದೆ. ಇಂದು ಮಧ್ಯಾಹ್ನ 3.40 ರಿಂದ 4.15 ರೊಳಗೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿಯನ್ನು ಹೊತ್ತು ಜಂಬೂಸವಾರಿ ಸಾಗಲಿದೆ.
ಈ ಬಾರಿ ಅರ್ಜುನನ ಬದಲಿಗೆ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದಾನೆ. 750 ಕೆ ಜಿ ತೂಕದ ಅಂಬಾರಿಯನ್ನು ಅಭಿಮಬ್ಯು ಹೊತ್ತು ಸಾಗಲಿದ್ದಾನೆ.