ದುಬೈ; IPLನ ಆವೃತ್ತಿಯ 30ನೇ ಪಂದ್ಯದಲ್ಲಿ ಇಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸ್ಟೀವನ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಪ್ರಸ್ತುತ ಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠವಾಗಿದ್ದರೂ ಯಾವುದೇ ಕ್ಷಣದಲ್ಲೂ ಪುಟಿದೇಳುವ ಸಾಮರ್ಥ್ಯವಿರುವ ರಾಜಸ್ಥಾನ್ ರಾಯಲ್ಸ್ ನಡುವೆ ಇಂದು ಹೈವೋಲ್ಟೆಜ್ ಪಂದ್ಯ ನಿರೀಕ್ಷಿಸಲಾಗಿದೆ
ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಶರಣಾಗಿದ್ದ ಡೆಲ್ಲಿ ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಮತ್ತೆ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ. ಇತ್ತ ಈ ಆವೃತ್ತಿಯಲ್ಲಿ ಮೊದಲೆರೆಡು ಪಂದ್ಯದಲ್ಲಿ ಗೆದ್ದಿದ್ದ ರಾಜಸ್ಥಾನ ಬಳಿಕ 4 ಪಂದ್ಯದಲ್ಲಿ ಹೀನಾಯ ಸೋಲುಕಂಡಿತ್ತು. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಜಯದ ಸಿಹಿ ಉಂಡಿರುವ ರಾಜಸ್ಥಾನ, ಇದೀಗ ಬಲಿಷ್ಠ ಡೆಲ್ಲಿ ವಿರುದ್ಧ ಮತ್ತೊಂದು ಜಯದ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.
ಗಾಯದ ಸಮಸ್ಯೆಯಿಂದಾಗಿ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಇಂದೂ ಕೂಡ ಅಲಭ್ಯರಾಗಲಿದ್ದಾರೆ. ಅವರ ಜಾಗದಲ್ಲಿ ಅಜಿಂಕ್ಯ ರಹಾನೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ ವಿಕೆಟ್ ಕೀಪರ್ ಆಗಿ ಅಲೆಕ್ಸ್ ಕ್ಯಾರಿ ಅವಕಾಶ ಪಡೆಯಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಫಾರ್ಮ್ಗೆ ಮರಳಿರುವುದು ಡೆಲ್ಲಿ ಪಾಳಯದ ಚಿಂತೆಯನ್ನು ದೂರ ಮಾಡಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ಬೆನ್ ಸ್ಟೋಕ್ಸ್ ಆಗಮನದಿಂದ ಆಲ್ರೌಂಡರ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಆದರೆ ಆರಂಭಿಕರ ವೈಫಲ್ಯ ಹಾಗೂ ಮಧ್ಯಮ ಕ್ರಮಾಂಕದ ವಿಫಲತೆ ಸ್ಮಿತ್ ಚಿಂತೆಯನ್ನು ಹೆಚ್ಚಿಸಿದೆ. ಮೊದಲೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಮಿತ್ ಹಾಗೂ ಸ್ಯಾಮ್ಸನ್ ಮತ್ತೆ ಮೋಡಿ ಮಾಡಲು ಸಾಧ್ಯವಾಗದಿರುವುದು ರಾಜಸ್ಥಾನ್ ಸೋಲಿಗೆ ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ ಸತತ ವೈಫಲ್ಯದಿಂದ ಬಳಲುತ್ತಿರುವ ರಾಬಿನ್ ಉತ್ತಪ್ಪ ಅವರನ್ನು ಇಂದಿನ ಪಂದ್ಯದಿಂದ ಕೈ ಬಿಡುವ ಸಾಧ್ಯತೆಯಿದೆ. ಇವರ ಸ್ಥಾನದಲ್ಲಿ ಮನನ್ ವೋಹ್ರಾಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಿನಲ್ಲಿ ಇಂದಿನ ಪಂದ್ಯದ ಮೂಲಕ ಉಭಯ ತಂಡಗಳು ಎರಡನೇ ಹಂತದ ಮ್ಯಾಚ್ಗಳನ್ನು ಆರಂಭಿಸುತ್ತಿದ್ದು, ಹೀಗಾಗಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರುವ ಬಿಗ್ ಪ್ಲ್ಯಾನಿಂಗ್ನಲ್ಲಿದೆ. ಹೀಗಾಗಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಬಲಿಷ್ಠ ತಂಡವನ್ನೇ ಇಂದು ಕೂಡ ಮೈದಾನಕ್ಕಿಳಿಸಲಿದೆ.ಹಾಗಾಗಿ ಇಂದು ನಡೆಯುವ ಪಂದ್ಯ ಕೂಡಾ ಹೈವೋಲ್ಟೇಜ್ ಪಂದ್ಯವಾಗಿದೆ.
ಇನ್ನು ಪಿಚ್ ರಿಪೋರ್ಟ್ ಅನ್ನು ನೋಡುವುದಾದರೆ,ದುಬೈ ಪಿಚ್ ಸಮತೋಲದಿಂದ ಕೂಡಿದೆ. ಪಂದ್ಯದ ಆರಂಭದಲ್ಲಿ ಸ್ವಿಂಗ್ ಬೌಲರ್ ಗಳಿಗೆ ಹೆಚ್ಚು ಯಶಸ್ಸು ದೊರಕಲಿದೆ. ಸಮಯದ ಕಳೆದಂತೆ ಸ್ಪಿನ್ನರ್ಗಳು ವಿಕೆಟ್ ಕೀಳಲಿದ್ದಾರೆ. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ : ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಷಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿ.ಕೀ), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್. ಅಶ್ವಿನ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ
ರಾಜಸ್ಥಾನ ರಾಯಲ್ಸ್ :ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ಜೋಶ್ ಬಟ್ಲರ್ (ವಿಕೀ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ/ಮನನ್ ವೋಹ್ರಾ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.