ನವದೆಹಲಿ: ದೇಶದ ಸ್ಟಾರ್ ಬಾಕ್ಸರ್ ,ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತೆ ಭಾರತದ ಸಿಮ್ರನ್ಜೀತ್ ಕೌರ್ ಅವರು ಜರ್ಮನಿಯ ಕೊಲೊನ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿದ್ದಾರೆ.
ಶುಕ್ರವಾರ ನಡೆದ 60 ಕೆಜಿ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಉಕ್ರೇನ್ನ ಮರಿಯಾನಾ ಬ್ಯಾಸನೆಟ್ಸ್ ಅವರನ್ನು 4-1ರಿಂದ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.
ಇನ್ನುಳಿದಂತೆ ಪುರುಷರ 91+ ಕೆ.ಜಿ. ವಿಭಾಗದಲ್ಲಿ ಸತೀಶ್ ಕುಮಾರ್, ಮಾಲ್ಡೋವಾದ ಜವಾಂಟಿನ್ ಅಲೆಕ್ಸೆಲ್ ವಿರುದ್ಧ 5-0 ಯಿಂದ ಗೆಲುವು ಪಡೆಯುವ ಮೂಲಕ ಉಪಾಂತ್ಯ ಪ್ರವೇಶಿಸಿ ಪದಕ ಖಚಿತ ಪಡಿಸಿದರು
57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್ ಅವರು 3-2ರಿಂದ ಉಕ್ರೇನ್ನ ಸ್ನಿಜಾನಾ ಖೊಲೊಡ್ಕೊವಾ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ಅವರು ಭಾರತದವರೇ ಆದ ಮನೀಷಾ ಅವರನ್ನು ಎದುರಿಸಲಿದ್ದಾರೆ. ಮನೀಷಾ ಸೆಮಿಫೈನಲ್ಗೆ ಬೈ ಪಡೆದಿದ್ದಾರೆ.ಈ ಮೂಲಕ ಭಾರತ ಬಾಕ್ಸಿಂಗ್ ತಂಡ ಪದಕಗಳನ್ನು ಬಾಚಿಕೊಳ್ಳಲು ಸಜ್ಜಾಗಿದೆ.