ನವದೆಹಲಿ: ದೇಶದ ಪ್ರಸಕ್ತ ವರ್ಷದ ಆರ್ಥಿಕತೆ ಭಾರೀ ಕುಸಿತ ಕಂಡಿದೆ. ಮೊದಲನೇ ತ್ರೈಮಾಸಿಕದಲ್ಲಿ ಭಾರೀ ಕುಸಿತದ ನಂತರ ಇದೀಗ ಎರಡನೇ ಅಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ)ಬೆಳವಣಿಗೆ 7.5% ನಷ್ಟು ಕುಸಿತ ಕಂಡಿದೆ.
ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ಶೇ. 23.9 ರಷ್ಟು ದಾಖಲೆಯ ಕುಸಿತಕ್ಕೆ ಸಾಕ್ಷಿಯಾಗಿತ್ತು.ಎಂಟು ಕೈಗಾರಿಕಾ ಬೆಳವಣಿಗೆ ದರವು ಅಕ್ಟೋಬರ್ನಲ್ಲಿ -2.5% ರಷ್ಟಿದ್ದು, ಸೆಪ್ಟೆಂಬರ್ನಲ್ಲಿ -0.1% (ಹಿಂದಿನ -0.8% ರಿಂದ ಪರಿಷ್ಕರಿಸಲಾಗಿದೆ)ರಿಂದ ಇಳಿಕೆಯಾಗಿದೆ.
ಭಾರತದ ವಿತ್ತೀಯ ಕೊರತೆ ಆರ್ಥಿಕ ವರ್ಷ 2021ರ ಏಪ್ರಿಲ್- ಅಕ್ಟೋಬರ್ ಅವಧಿಯಲ್ಲಿ 119.7% ಇದೆ. ಬಜೆಟ್ ಗುರಿ 7.96 ಲಕ್ಷ ಕೋಟಿ ರುಪಾಯಿ ಇತ್ತು. ಆದರೆ ವಾಸ್ತವದಲ್ಲಿ ಕೊರತೆ 9.53 ಲಕ್ಷ ಕೋಟಿ ರುಪಾಯಿ ಇದೆ.
ಈ ಮೊದಲು ಭಾರತದ ಜಿಡಿಪಿ ಬೆಳವಣಿಗೆಯು ಕೋವಿಡ್-19 ಪ್ರೇರಿತ ಲಾಕ್ ಡೌನ್ ನಿರ್ಬಂಧಗಳಿಗೂ ಮುನ್ನ ನಿಧಾನವಾಯಿತು ಎಂದು ದತ್ತಾಂಶಗಳು ತೋರಿಸಿವೆ. ಕಿ4 ಈಙ20 ನಲ್ಲಿ 3.1% ಬೆಳವಣಿಗೆ ದರವು 2012-2013ರಲ್ಲಿ ಆರಂಭವಾದ ಹೊಸ ಡೇಟಾ ಸರಣಿಯಲ್ಲಿ ಅತ್ಯಂತ ದುರ್ಬಲ ಅಂಶವಾಗಿತ್ತು. ಈಙ20 ನೈಜ ಜಿಡಿಪಿ ಬೆಳವಣಿಗೆ 4.2%, ಇದು ಈ ಸರಣಿಯಲ್ಲಿ ಅತ್ಯಂತ ದುರ್ಬಲವಾಗಿದೆ.