ಮಹಾರಾಷ್ಟ್ರ : ಈಗಾಗಲೇ ದೇಶದಲ್ಲಿ ನವರಾತ್ರಿ ಆರಂಭಗೊಂಡಿದೆ. ನವರಾತ್ರಿಯ ವೇಳೆ ದೇವಸ್ಥಾನಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಪ್ರತಿ ದಿನ ಒಂದೊಂದು ರೀತಿಯ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ನವರಾತ್ರಿಯ ದಿನವೇನಾದ್ರೂ ಹೆಣ್ಣು ಮಗು ಜನಿಸಿದ್ರೆ ಆ ಮಗುವನ್ನ ದೇವಿಯ ವರ ಎಂದೇ ಹೇಳಲಾಗುತ್ತದೆ. ಆದ್ರೆ ಇಲ್ಲೊಂದು ನರ್ಸಿಂಗ್ ಹೋಂ ನಲ್ಲಿ ನವರಾತ್ರಿಯ ಆರಂಭದ ದಿನವೇ 9 ಹೆಣ್ಣು ಮಕ್ಕಳು ಜನಿಸಿರುವುದು ವಿಶೇಷವಾಗಿದೆ.
ಹೌದು, ಮಹಾರಾಷ್ಟ್ರದ ನರ್ಸಿಂಗ್ ಹೋಂ ವೊಂದರಲ್ಲಿ ಒಂದೇ ದಿನ ಒಂಭತ್ತು ಹೆಣ್ಣು ಮಕ್ಕಳು ಜನಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಒಟ್ಟು 11 ಮಕ್ಕಳು ಜನಿಸಿದ್ದು, ಅದರಲ್ಲಿ 9 ಹೆಣ್ಣು ಮಕ್ಕಳಾಗಿದ್ದಾರೆ.
ಈ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹಾಸ್ಯ ನಟ ಮತ್ತು ಡಾಕ್ಟರ್ ಸಂಕೇತ್ ಬೋಸಲೆ, ಆ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. ನವರಾತ್ರಿಯ ದಿನ ನವ ಹೆಣ್ಣು ಮಕ್ಕಳ ಜನನವಾಗಿದೆ. ಇದು ಶುಭ ಸೂಚಕ ಎಂದು ಬರೆದುಕೊಂಡಿದ್ದಾರೆ. ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ನವ ದೇವಿಯರ ಜನನ ಎಂದು ಒಂದಷ್ಟು ಜನ ಕಮೆಂಟ್ ಮಾಡಿದ್ದಾರೆ.