ಕೊರೊನಾ ವೈರಸ್ ಮಹಾಮಾರಿ ನಮ್ಮ ದೇಶಕ್ಕೆ ಬಂದಾಗಿನಿಂದ ಎಲ್ಲರಿಗೂ ಭಯ ಕಾಡೋದಕ್ಕೆ ಶುರುವಾಗಿಬಿಟ್ಟಿದೆ. ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡರೆ ಈ ವೈರಸ್ ಕಾಟ ತಪ್ಪುತ್ತೆ ಅನ್ನೋದು ಗೊತ್ತಾದಾಗಿನಿಂದ ಎಲ್ಲರು ಒಂದೊಂದು ಮನೆ ಮದ್ದು ಮಾಡುತ್ತಲೇ ಇದ್ದಾರೆ. ಅದಕ್ಕೆ ಮದ್ದು ಕೂಡ ಸದ್ಯ ನಮ್ಮಲ್ಲಿರುವ ಯುಮ್ಯುನಿಟಿ ಪವರ್ ಅನ್ನು ಹೆಚ್ಚು ಮಾಡಿಕೊಳ್ಳುವುದು. ಆದ್ರೆ ರೋಗ ನಿರೋಧಕ ಶಕ್ತಿ ಕೂಡ ಅಷ್ಟು ಬೇಗ ಹೆಚ್ಚಲ್ಲ. ಅದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಸದ್ಯ ನಾವೇಳು ಕೆಲವೊಂದು ಟಿಪ್ಸ್ ಗಳನ್ನ ನೀವೂ ಫಾಲೋ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬಹುದು.
ಹೀಗೆ ಮಾಡಿ:
- ಯೋಗಾಭ್ಯಾಸ ಸರ್ವ ರೋಗಕ್ಕು ಮದ್ದು ಎಂಬ ಮಾತಿದೆ. ಹೀಗಾಗಿ ನೀವೂ ಯೋಗಾಭ್ಯಾಸವನ್ನು ಆರಂಭಿಸಿ. ದಿನಪೂರ್ತಿ ಚಟುವಟಿಕೆಯಿಂದ ಕೂಡ ಇರುತ್ತೀರಾ.
- ಕೊಬ್ಬರಿ ಎಣ್ಣೆಯಿಂದ ದಿನ ಬಾಯಿ ಮುಕ್ಕಳಿಸಿ ಉಗಿಯಿರಿ. ಯಾಕಂದ್ರೆ 4-5 ನಿಮಿಷ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿಯಲ್ಲಿರುವ ಕೀಟಾಣುಗಳು ಸಹ ಹೊರಗೆ ಹೋಗುತ್ತವೆ.
- ಬಿಸಿ ನೀರನ್ನ ಕುಡಿಯುತ್ತಿರಿ. ಬಿಸಿ ನೀರಿಗೆ ನಿಂಬೆ, ಜೇನು ತುಪ್ಪ ಹಾಖಿ ಕುಡಿದರೆ ಇನ್ನು ಉತ್ತಮ.
- ಮುಖ್ಯವಾಗಿ ಬೆಳಗಿನ ಆಹಾರವನ್ನು ಮಿಸ್ ಮಾಡಿಕೊಳ್ಳಲೇಬೇಡಿ. ಎಷ್ಟೊ ಸಲ ಆಫೀಸ್ ಒತ್ತಡ, ಸಾಲದ ಸಮಯದಲ್ಲಿ ನ್ರೇಕ್ ಫಾಸ್ಟ್ ಬಿಟ್ಟು ಓಡುವವರೇ ಜಾಸ್ತಿ.
ಇಷ್ಟನ್ನು ಚಾಚು ತಪ್ಪದೇ ಪಾಲಿಸಿ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.