Saturday, July 24, 2021
No menu items!
Home Karnataka ಐಎಂಎ ಹಗರಣ: ರೋಷನ್ ಬೇಗ್ ಗೆ ಮುಳುವಾದ ಐಎಎಸ್ ಅಧಿಕಾರಿ ಹರ್ಷ ಗುಪ್ತ ಪತ್ರ...!

ಐಎಂಎ ಹಗರಣ: ರೋಷನ್ ಬೇಗ್ ಗೆ ಮುಳುವಾದ ಐಎಎಸ್ ಅಧಿಕಾರಿ ಹರ್ಷ ಗುಪ್ತ ಪತ್ರ…!

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿಯಾಗಿ ಮಾಜಿ ಶಾಸಕ ರೋಷನ್ ಬೇಗ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇದಕ್ಕೆ ಪುರಾವೆ ನೀಡಲು ಬಲವಾದ ಸಾಕ್ಷಿಯೊಂದು ದೊರಕಿದ್ದು IAS ಅಧಿಕಾರಿ ಹರ್ಷ ಗುಪ್ತ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೀಡಿರುವ ಪತ್ರದಲ್ಲಿ ಮಾಜಿ ಶಾಸಕರ ಮತ್ತು ಐಎಂಎ ನಡುವಿನ ಸಂಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಂದಾಯ ಇಲಾಖೆಯ ಮನವಿ ಮೇರಗೆ ತನಿಖೆ ನಡೆಸಿ ಪ್ರಧಾನ ಕಾರ್ಯದರ್ಶಿಗೆ ವರದಿ ನೀಡಿರುವ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರು ವರದಿಯಲ್ಲಿ ಮಾಜಿ ಶಾಸಕ ಆರ್‌. ರೋಷನ್ ಬೇಗ್ ಅವರು ಐಎಂಎ ಸಂಸ್ಥೆಯ ಜೊತೆಗೂಡಿ ಭಾರೀ ಪ್ರಮಾಣದಲ್ಲಿ ಹಣಗಳಿಸಿರುವುದನ್ನು ದಾಖಲೆ ಸಮೇತ ಸಾಬೀತು ಮಾಡಿದ್ದಾರೆ. ವರದಿ ನೀಡಿದ ಎರಡೇ ದಿನದಲ್ಲಿ ರೋಷನ್ ಬೇಗ್ ಅರೆಸ್ಟ್ ಆಗಿದ್ದು ಪರಪ್ಪನ ಅಗ್ರಹಾರ ಸೇರಿದ್ದಾರೆ.

ರೋಷನ್ ಬೇಗ್ ಐಎಂಎ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಪ್ರಮೋಟ್ ಮಾಡಿ ಅದರಿಂದ ಲಾಭ ಮಾಡಿಕೊಂಡಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಐಎಂಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ಮತ್ತು ರೋಷನ್ ಬೇಗ್ ಅವರ ನಡುವೆ ಹಲವು ವ್ಯವಹಾರಿಕ ಸಂಬಂಧ ಮತ್ತು ಹಣಕಾಸಿನ ವ್ಯವಹಾರ ಕೂಡಾ ಇತ್ತು ಎಂದು ಹೇಳಲಾಗಿದೆ.

ಇನ್ನು ಶಿವಾಜಿನಗರದ ಗಣೇಶ್ ಟವರ್ಸ್ ನಲ್ಲಿದ್ದ ಮಾಜಿ ಶಾಸಕ ರೋಷನ್ ಬೇಗ್ ಒಡೆತನದ ದಿ ಸಿಯಾಸಿತ್ ಡೈಲಿ ಎಂಬ ಉರ್ದು ಪತ್ರಿಕೆಯ ಕಛೇರಿಯಲ್ಲಿ ಐಎಂಎ ಸಂಸ್ಥೆಗೆ ಸೇರಿದ ಹಲವು ದಾಖಲೆಗಳು ಎಸ್ಐಟಿ ಗೆ ಪತ್ತೆಯಾಗಿದ್ದವು.
ಇದೇ ಕಛೇರಿಯಲ್ಲಿ ಹಲವರನ್ನ ಸೆಳೆದು ಹಣ ಹೂಡಿಕೆಗೆ ಪ್ರೇರೇಪಿಸಿರುವ ವಿಚಾರವೂ ಬಯಲಾಗಿದೆ. ಇದೆಲ್ಲವುದರ ಬಗ್ಗೆ ಸಮಗ್ರ ತನಿಖೆ ಮಾಡುವುದು ಸೂಕ್ತ ಎಂದು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದೀಗ ರೋಷನ್ ಬೇಗ್ ಬಂಧನವಾಗಿದ್ದು ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments