Monday, January 24, 2022
No menu items!
Home Karnataka ಭೀಮಾತೀರದ ಮಹಾದೇವ್ ಸಾಹುಕಾರ್ ಕೊಲೆ ಯತ್ನದ ಕಾರಣ ಬಿಚ್ಚಿಟ್ಟ ಐಜಿ

ಭೀಮಾತೀರದ ಮಹಾದೇವ್ ಸಾಹುಕಾರ್ ಕೊಲೆ ಯತ್ನದ ಕಾರಣ ಬಿಚ್ಚಿಟ್ಟ ಐಜಿ

ವಿಜಯಪುರ: ನವೆಂಬರ್ 2 ರಂದು ಭೀಮಾತೀರದಲ್ಲಿ ಗುಂಡಿನ ದಾಳಿ ನಡೆದಿತ್ತು. ಭೀಮಾತೀರದ ಹಂತಕ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಅಪರಿಚಿತರಿಂದ ಫೈರಿಂಗ್ ನಡೆದಿತ್ತು. ಗುಂಡಿನ ದಾಳಿಯಲ್ಲಿ ಮಹಾದೇವ ಸಾಹುಕಾರ, ಬಾಬುರಾಯ ಎಂಬುವರಿಗೂ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಬಾಬುರಾಯ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದನು. ಈ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದು, ಇಂಚಿಂಚು ಮಾಹಿತಿಯನ್ನು ನೀಡಿದ್ದಾರೆ.

ಮಹಾದೇವ ಸಾಹುಕಾರ ಮೇಲೆ ದಾಳಿ ನಡೆಸಲು ಆರೋಪಿಗಳು ದಾಳಿ ಮಾಡಿದ ಹಿಂದಿನ ದಿನವೇ ಸಭೆ ನಡೆಸಿದ್ದಾರೆ. ನವೆಂಬರ್ 2 ರಂದು ಅಪಘಾತ ಮತ್ತು ಫೈರಿಂಗ್ ಗೂ ಮುಂಚೆ ಎರಡು ಬಾರಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಆದ್ರೂ ಕೂಡ ಅದು ವಿಫಲವಾಗಿತ್ತಂತೆ. ಧರ್ಮರಾಜ ಚಡವಣ ಸಹಚರ ಮಡಿವಾಳಯ್ಯ ಹಿರೇಮಠ ಸ್ವಾಮಿ ನೇತೃತ್ವದಲ್ಲಿ ಈ ಸ್ಕೆಚ್ ಹಾಕಲಾಗಿತ್ತು. ಈತನಿಗೆ ವಿಜಯ ತಾಳಿಕೋಟಿ ಸಾಹುಕಾರ ಬಗ್ಗೆ ಮಾಹಿತಿ ನೀಡುತ್ತಿದ್ದನಂತೆ.

ದಾಳಿ ನಡೆಯುವ ದಿನ ಸಾಹುಕಾರ ಕಾತ್ರಾಳದಲ್ಲಿ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಮಾಹಿತಿ ಇತ್ತು. ಅಂದು ಬೆಳಿಗ್ಗೆ 3.30 ರಿಂದ ಬೆಳಗ್ಗೆ 8 ಗಂಟೆಯವರೆಗೆ ಅಲ್ಲಿ ಈ ಗ್ಯಾಂಗ್ ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ಟಿಪ್ಪರ್ ನೊಂದಿಗೆ ಕಾಯುತ್ತಿದ್ದರು. ಅಲ್ಲದೇ, ಏಳೆಂಟು ಮೋಟರ್ ಸೈಕಲ್ ಗಳಲ್ಲಿ ತಲಾ ಇಬ್ಬರಿಂದ ಮೂರು ಜನ ಕುಳಿತುಕೊಂಡು ಹೋಗಿದ್ದನ್ನು ಅಲ್ಲಿನ ಜನ ನೋಡಿದ್ದರು. ಆದರೆ, ಆಗ ಸಾಹುಕಾರ ಪ್ರವಚನ ಕಾರ್ಯಕ್ರಮಕ್ಕೆ ಬರಲಿಲ್ಲವಂತೆ.

ನಂತರ ಊಟ ಮಾಡಿದ ಯುವಕರು, ಬಳಿಕ ದೇವರ ನಿಂಬರಗಿ ಜಿಗಜಿಣಗಿ ಮಧ್ಯೆ ಕ್ರಾಸ್ ವೊಂದರ ಬಳಿ ಸಾಹುಕಾರ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಅಲ್ಲಿಯೂ ಟಿಪ್ಪರ್ ಬಂದಿತ್ತು. ಆದರೆ, ಸಾಹುಕಾರ ಇಲ್ಲಿಯೂ ಬರಲಿಲ್ಲ. ಆಗ ಎಲ್ಲರೂ ಅಲ್ಲಿಂದ ಚದುರಿ ಹೋದರು. ನಂತರ ವಿಜಯ ತಾಳಿಕೋಟೆ ನೀಡಿದ ಮಾಹಿತಿಯಂತೆ ಎಲ್ಲರೂ ತಕ್ಷಣ ಸಂಘಟಿತರಾದರು. ಮೂರನೇ ಪ್ಲ್ಯಾನ್ ನಂತೆ ಅಂದು ಸಾಹುಕಾರ ಚಿಂಚಲಿ ಪೈಪ್ ಫ್ಯಾಕ್ಟರಿಯಲ್ಲಿ ಊಟ ಮುಗಿಸಿ ತನ್ನ ಸ್ವಂತ ಊರು ಕೇರೂರಿಗೆ ಮರಳುತ್ತಿದ್ದ. ಈ ಸಂದರ್ಭದಲ್ಲಿ ಸಾಹುಕಾರನನ್ನು ಹಿಂಬಾಲಿಸುತ್ತಿದ್ದ ವಿಜಯ ತಾಳಿಕೋಟೆ ಮಡಿವಾಳಯ್ಯ ಹಿರೇಮಠ ಸ್ವಾಮಿಗೆ ಈ ಕುರಿತು ಮಾಹಿತಿ ನೀಡಿದ. ಸಾಹುಕಾರನ ಕಾರ್ ಕನ್ನಾಳ ಕ್ರಾಸ್ ಬಳಿ ಬರುತ್ತಿದ್ದಂತೆ ಟಿಪ್ಪರ ಅವರ ಕಾರಿಗೆ ಡಿಕ್ಕಿ ಹೊಡೆಯಿತು. ನಂತರ ಆರೋಪಿಗಳು ಕಲ್ಲು ತೂರಾಟ ನಡೆಸಿ ಫೈರಿಂಗ್ ಮಾಡಿದರು. ಪೆಟ್ರೋಲ್ ಬಾಂಬ್ ಕೂಡ ಎಸೆದು ಅಲ್ಲಿಂದ ಪರಾರಿಯಾದರು ಎಂದು ಅವರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿಯ ನಾಗಪ್ಪ ಉರ್ಫ ನಾಗರಾಜ ಪೀರಗೊಂಡ(28) ಮತ್ತೊಬ್ಬ ವಿಜಯಪುರ ನಗರದ ಕಿರಾಣಿ ವ್ಯಾಪಾರಿ ವಿಜಯ ತಾಳಿಕೋಟಿ. ಇವರಲ್ಲಿ ನಾಗಪ್ಪ ಉರ್ಫ್ ನಾಗರಾಜ ಪೀರಗೊಂಡ ಟಿಪ್ಪರ್ ಚಲಾಯಿಸಿ ಸಾಹುಕಾರ ಕಾರ್ ಗೆ ಅಪಘಾತ ಮಾಡಿದ್ದ. ಮತ್ತೊಬ್ಬ ವಿಜಯಪುರ ನಿವಾಸಿ ಮತ್ತು ಕಿರಾಣಿ ವ್ಯಾಪಾರಿ ವಿಜಯ ತಾಳಿಕೋಟೆ ಸಾಹುಕಾರ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments