ಪೇರಲೆ ಅಥವಾ ಸೀಬೆ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ಪ್ರಯೋಜನಕಾರಿ. ಹೇಗೆ ಅಂತೀರಾ? ಸೀಬೆ ಹಣ್ಣಿನ ಎಲೆಗಳು ಅತಿಸಾರ, ಕೊಲೆಸ್ಟ್ರಾಲ್ ನಿಯಂತ್ರಣ, ಮಧುಮೇಹ, ಮುಂತಾದವುಗಳಿಗೆ ಔಷಧಿಯಾಗಿ ಬಳಸಿಕೊಳ್ಳಬಹುದು. ಹೇಗೆ ಉಪಯೋಗಿಸಬೇಕು ಎನ್ನುವುದರ ಕುರಿತ ವಿಚಾರ ಇಲ್ಲಿದೆ.
ಸೀಬೆ ಎಲೆಗಳನ್ನು ಕುದಿಸಿದ ನೀರಿನಿಂದ ಮುಕ್ಕಳಿಸುವುದರಿಂದ ಹಲ್ಲುನೋವು, ಜಿಂಗೈವಿಟಿಸ್ ಮತ್ತು ಬಾಯಿ ಹುಣ್ಣುಗಳನ್ನು ಕೊನೆಗೊಳಿಸುತ್ತದೆ. ಹಾಗೆಯೇ ಇದು ಒಸಡುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.
ಅಲ್ಲದೆ ಪೇರಲೆ ಎಲೆಗಳು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದರ ಎಲೆಗಳಲ್ಲಿ 80 ಪ್ರತಿಶತ ನೀರಿನಾಂಶವಿದ್ದು, ಹಾಗೆಯೇ ಫೈಬರ್ ಅನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೇರಲೆ ಎಲೆಗಳು ವಿಟಮಿನ್ ಸಿ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವುದರಿಂದ, ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಇದರ ಎಲೆಗಳ ಕಷಾಯವು ಸಹಾಯ ಮಾಡುತ್ತದೆ. ಪೇರಲ ರಸವು ಶ್ವಾಸಕೋಶ ಮತ್ತು ಗಂಟಲನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.