Friday, May 14, 2021
No menu items!
Home Bharata ನಟಿಮಣಿಯರ ಮಾಲ್ಡೀವ್ಸ್ ಪ್ರವಾಸದ ಗುಟ್ಟು ಇಲ್ಲಿದೆ..!

ನಟಿಮಣಿಯರ ಮಾಲ್ಡೀವ್ಸ್ ಪ್ರವಾಸದ ಗುಟ್ಟು ಇಲ್ಲಿದೆ..!

ಲಾಕ್ ಡೌನ್ ತೆರವಾಗಿದ್ದು, ಮನೆಯಲ್ಲೇ ಇದ್ದ ಸೆಲೆಬ್ರೆಟಿಗಳೆಲ್ಲಾ ಪ್ರವಾಸದ ಗುಂಗಲ್ಲಿದ್ದಾರೆ. ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನಟಿಮಣಿಯರು ಬರೀ ಮಾಲ್ಡೀವ್ಸ್ ಕಡೆಗೆ ತಮ್ಮ ಪ್ರಯಾಣವನ್ನು ಬೆಳೆಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಟ್ರೋಲ್ ಕೂಡ ಕ್ರಿಯೇಟ್ ಆಗಿದ್ದವು. ಇದೀಗ ಯಾಕೆ ನಟಿಯರೆಲ್ಲಾ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗ್ತಾ ಇದ್ದಾರೆ ಎಂಬ ಬಗ್ಗೆ ವರದಿಯೊಂದು ಬಂದಿದೆ.

ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ಡೀವ್ಸ್ ನಲ್ಲಿ ತುಂಡುಡುಗೆ ತೊಟ್ಟು ಮರಳಿನ ಮೇಲೆ ಮಲಗಿ, ಸೂರ್ಯನ ಕಾಂತಿಗೆ ಮೈವೊಡ್ಡಿದ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿದ್ದವು. ಎಲ್ಲಾ ನಟಿಮಣಿಯರಿಗೂ ಇದ್ದಕ್ಕಿದ್ದ ಹಾಗೇ ಮಾಲ್ಡೀವ್ಸ್ ಮೇಲೆ ಪ್ರೀತಿ ಹೆಚ್ಚಾಗಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಇದು ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆಯ ಕಸರತ್ತು ಎಂಬುದು ಇದೀಗ ಗೊತ್ತಾಗಿದೆ.

ಜಾಹೀರಾತುಗಳು ವರ್ಕೌಟ್ ಆಗಲ್ಲ ಎಂಬುದನ್ನು ಅರಿತ ಮಾಲೀಕರು ಮ್ಯಾನೇಜರ್, ಪಿಆರ್ ಗಳ ಮೂಲಕ ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಹೀಗೆ ವಿವಿಧ ಭಾಷೆಗಳ ಸಿನಿಮಾಗಳ ನಟಿಯರನ್ನು ಸಂಪರ್ಕಿಸಿ ಮಾಲ್ಡಿವ್ಸ್ ಗೆ ಆಹ್ವಾನಿಸಿದ್ದಾರೆ.

ಡಜನ್ಗಟ್ಟಲೇ ನಟಿಯರನ್ನು ಆಹ್ವಾನಿಸಿರುವ ರೆಸಾರ್ಟ್ ಮಾಲೀಕರು ತಾರೆಯರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಆಫರ್ ಮಾಡಿದ್ದಾರೆ. ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಆಯೋಜಕರೇ ಒದಗಿಸಿ ತಂಡೋಪತಂಡವಾಗಿ ನಟಿಮಣಿಯರನ್ನು ಕರೆಸಿಕೊಂಡಿದ್ದಾರೆ.

ಇದರೊಂದಿಗೆ ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮೇಲೆತ್ತಲು ಪ್ರಯತ್ನಿಸಿದ್ದಾರೆ.

ನಟಿ ಮಣಿಯರಿಗೆ ಊಟ, ವಸತಿ, ಶಾಪಿಂಗ್ ಜೊತೆಗೆ ಪ್ರತ್ಯೇಕ ಫೋಟೋಗ್ರಾಫರ್ಗಳನ್ನೂ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಷರತ್ತುಗಳನ್ನೂ ವಿಧಿಸಿದ್ದಾರೆ. ಪ್ರತಿ ದಿನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ 2-3 ಫೋಟೋ ಅಪ್ಲೋಡ್ ಮಾಡಬೇಕು. ಪ್ರತಿ ಚಿತ್ರಗಳಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು ಎಂಬ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments