ಅಗಸೆ ಬೀಜದ ಬಗ್ಗೆ ಎಲ್ಲರು ಕೇಳಿಯೇ ಇರ್ತೀರಾ. ಅದು ನಮ್ಮ ದೇಹಕ್ಕೆ ರಕ್ತದಲ್ಲಿನ ಕೊಬ್ಬಿನಂಶವನ್ನು ನಿಯಂತ್ರಿಸುವುದು. ದಿನನಿತ್ಯ ಅಗಸಿ ಪುಡಿ ಸೇವನೆಯು ರಕ್ತದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ.
* ಸಕ್ಕರೆ ಖಾಯಿಲೆಯ ನಿಯಂತ್ರಣ:
ರಕ್ತದ ಸಕ್ಕರೆಯಂಶವನ್ನು ಹತೋಟಿಯಲ್ಲಿಡಲು ಇದು ಸಹಕರಿಸುತ್ತದೆ. ಟೋರ್ಯಾನ್ಟೋ ಯುನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಗೋಧಿಹಿಟ್ಟಿನಿಂದ ತಯಾರಿಸಿದ ಬ್ರೆಡ್ ಹಾಗೂ ಅಗಸಿಯಿಂದ ತಯಾರಿಸಿದ ಬ್ರೆಡ್ ಎರಡನ್ನು ಎರಡು ಗುಂಪಿಗೆ ಕೊಟ್ಟನಂತರ ಅವರ ರಕ್ತದಲ್ಲಿನ ಸಕ್ಕರೆಯಂಶವನ್ನು ಕಂಡುಹಿಡಿದಾಗ, ಅಗಸಿಯ ಬ್ರೆಡ್ ಸೇವಿಸಿದವರ ರಕ್ತದಲ್ಲಿನ ಸಕ್ಕರೆಯಂಶವು ಗಮನಾರ್ಹವಾಗಿ ಮತ್ತೊಂದು ಗುಂಪಿನವರಿಗಿಂತ ಕಡಿಮೆಯಾದದ್ದು ತಿಳಿದು ಬಂದಿದೆ.
ಮುಂಜಾನೆ ಖಾಲೀ ಹೊಟ್ಟೆಯಲ್ಲಿ ೩ ಚಮಚೆ ಅಗಸಿ ೨ ಗ್ಲಾಸ್ ನೀರಿನಲ್ಲಿ ಕುದಿಸಿ ಅರ್ಧಕ್ಕೆ ಬಂದಮೇಲೆ ಕುಡಿಯಬೇಕು. ಹೀಗೆ ೩ ತಿಂಗಳು ತಪ್ಪದೇ ಅಗಸಿಯ ಕಾಡೆ (ಕಾಠಾ) ಕುಡಿದಲ್ಲಿ ಹೃದಯ ಬ್ಲಾಕ್ಸ್ ನಿವಾರಣೆಯಾಗಿ ಎನಜಿಯೊ ಪ್ಲಾಸ್ಟಿಕ್ ಕೂಡ ಮಾಡಿಸ ಬೇಕಿಲ್ಲ.
ಇದರಿಂದ ಲಕವಾ ಪ್ಯಾರಾಲಿಸಿಸ್, ಕೂದಲು ಉದುರುವಿಕೆ, ಕೂದಲು ಬೆಳ್ಳಗಾಗುವಿಕೆ, ಕೀಲು ನೋವು, ಅತಿಯಾದ ದೇಹದತೂಕ, ಮೂಗು ಕಟ್ಟುವಿಕೆ, ಸೈನಸ, ದೂರಾಗುತ್ತವೆ. ಇದೇ ರೀತಿ ಕಷಾಯ ಮುಂಜಾನೆ ಸಂಜೆ ಎರಡೂ ಹೊತ್ತು ಸೇವಿಸಿದರೆ ಕ್ಯಾನ್ಸರ್ ರೋಗವೂ ಗುಣವಾಗುತ್ತದೆ. ಹೊಟ್ಟಗೆ ಸಂಬಂಧ ಪಡುವ ಯಾವುದೇ ತೊಂದರೆ ಅಗಸಿ ಸೇವನೆಯಿಂದ ಗುಣವಾಗುತ್ತದೆ.
* ಕ್ಯಾನ್ಸರ್ಗೆ ರಾಮಬಾಣ: ಅಗಸಿಯಲ್ಲಿ ಲಿಗ್ನನ್ ಎಂಬಂಶವಿದೆ. ಇದು ಒಂದು ತೆರನಾದ ಫೈಟೋ ಇಸ್ಟ್ರೋಜನ್, ಇದಕ್ಕೆ ಹೆಂಗಸರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿಯಿದೆ. ಜೊತೆಗೆ ಇದರಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಲ್ಫಲಿನೋಲಿಕ್ ಆಸಿಡ್ ಎಂಬ ಮತ್ತೊಂದು ಅಂಶವಿದೆ. ಅಗಸಿಯಲ್ಲಿರುವ ನಾರಿನಂಶ, ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
* ಅಗಸಿಯಿಂದ ಮಲಬದ್ಧತೆ ನಿವಾರಣೆ:
ಅಗಸಿಯಲ್ಲಿರುವ ನಾರಿನಂಶ ಮಲಬದ್ಧತೆಯನ್ನು ನಿವಾರಿಸುತ್ತದೆ. ಒಂದು ಔನ್ಸ್ ಅಗಸಿಯು ಶರೀರಕ್ಕೆ ಬೇಕಾದ ಶೇ. 32 ರಷ್ಟು ನಾರಿನಂಶವನ್ನು ನೀಡುತ್ತದೆ. ಅಗಸಿಯಲ್ಲಿ ಎರಡು ರೀತಿಯ ನಾರಿನಂಶವಿರುತ್ತದೆ. ಅವು ನೀರನ್ನು ಹೀರಿ, ಮಲವನ್ನು ಮೃದುವಾಗಿಸುವುದು, ಇದರಿಂದ ಕರುಳಿನಲ್ಲಿನ ಮಲವು ಸುಲಭವಾಗಿ ಮುಂದೆ ಸಾಗಿ ಹೊರ ಹಾಕಲ್ಪಡುವುದು.
* ಋತುಬಂಧದ ಸಮಸ್ಯೆಗಳಿಗೆ: ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರು ಮನಸಿನ ಸಮಸ್ಯೆಗಳು, ಕಿರಿಕಿರಿ, ಮೈ ಬಿಸಿಯೇರುವುದು, ಬೆವರುವುದು ಎಂಬಂತೆ ಅನೇಕಾನೇಕ ತೊಂದರೆಗಳನ್ನು ಅನುಭವಿಸುವರು. ಇಂಥಹ ತೊಂದರೆಗಳ ನಿವಾರಣೆಗೆ ಅಗಸಿ ಉಪಯುಕ್ತವೇ?
ಹೌದು ಎನ್ನುತ್ತವೆ ಅನೇಕ ಸಂಶೋಧನೆಗಳು. ಅಗಸಿಯ ಸೇವನೆಯಿಂದ ದೇಹಕ್ಕೆ ಪೂರೈಕೆಯಾಗುವ ಫೈಟೋ ಇಸ್ಟ್ರೋಜನ್, ನಮ್ಮ ದೇಹದ ಇಸ್ಟ್ರೋಜನ್ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಆಗ ಮುಟ್ಟು ನಿಲ್ಲುವ ಸಮಯದಲ್ಲಾಗುವ ತೊಂದರೆಗಳ ನಿವಾರಣೆಯಾಗುವುದು.
* ಹೃದಯ ತೊಂದರೆಗೆ:
ಹೃದಯ ಕಾಯಿಲೆಯ ನಿಯಂತ್ರಣಕ್ಕೂ ಅಗಸಿ ಸಹಕಾರಿಯೆನ್ನಲಾಗಿದೆ. ಹೃದಯ ಬಡಿತದ ಏರು ಪೇರನ್ನೂ ಇದು (ಅರಿಥ್ಮಿಯಾಸ್) ಸರಿಪಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಕೀಲು ನೋವು, ಆಸ್ತಮ, ರುಮಟಾಯ್ಡ ಆರ್ಥೈಟಿಸ್, ಮೈಗ್ರೇನ್, (ಅರೆ ತಲೆನೋವು), ಮೂಳೆಸವೆತ ಹಾಗೂ ಇನ್ನಿತರೆ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ.
ಆಲಸ್ಯ, ಸುಸ್ತಿ, ಲವಲವಿಕೆ ಇಲ್ಲದಿರುವುದು, ಶ್ವಾಸ, ದಮ್ಮು, ಕಫ, ಕೆಮ್ಮು, ಹೃದಯದ ತೊಂದರೆ, ಅಲರ್ಜಿ ಎಲ್ಲವುಗಳಿಗೂ ಅಗಸಿ ರಾಮಬಾಣ, ದಿವ್ಯೌಷಧಿ.
-Shakuntala Iyer