ಉತ್ತರ ಪ್ರದೇಶ : ದೇಶಾದ್ಯಂತ ಕೋಲಾಹಲವೆಬ್ಬಿಸಿರುವ ಮನುಕುಲ ಸಮಾಜವೇ ತಲೆತಗ್ಗಿಸುವ ಹತ್ರಾಸ್ ಜಿಲ್ಲೆಯ 19 ವರ್ಷದ ದಲಿತ ಯುವತಿ ಮೇಲೆ ನಡೆದಿದೆ ಎನ್ನಲಾಗಿರುವ ಬಲವಂತದ ಅತ್ಯಾಚಾರ ಪ್ರಕರಣ, ಇದೀಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ.
ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ , ಆಕೆ ಆಸ್ಪತ್ರೆಗೆ ಸೇರಿದ್ದಾಗಿನ ಸಿಸಿಟಿವಿ ಪೂಟೇಜ್ ಗಳು ಕಾಣೆಯಾಗಿವೆ.
ದೇಶದಲ್ಲಿ ಭಾರೀ ಕೋಲಾಹಲವೆಬ್ಬಿಸಿದ ನಂತರ ತನಿಖೆ ಸಿಸಿಬಿ ಕೈ ಸೇರಿತ್ತು .ಇದೇ ವಿಚಾರವಾಗಿ ಇಂದು ಸಿಸಿಬಿ ಅಧಿಕಾರಿಗಳು ಸೆ. 14ರಂದು, ಅತ್ಯಾಚಾರಕ್ಕೆ ಒಳಗಾಗಿ, ಆಸ್ಪತ್ರೆ ಸೇರಿದ್ದರೆನ್ನಲಾದ ಪ್ರಕರಣ ಸಂಬಂಧ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಲು ಹೋಗಿತ್ತು. ಆದರೆ ಸಿಬಿಐ ಅಧಿಕಾರಿಗಳಿಗೇ ಸಿಸಿಟಿವಿ ವೀಡಿಯೋಗಳು ಡಿಲಿಟ್ ಆಗಿರುವುದಾಗಿ ಆಸ್ಪತ್ರೆ ತಿಳಿಸಿದೆ.ಇದು ಪ್ರಕರಣದ ಸುತ್ತ ಇನ್ನಷ್ಟು ಗುಮಾನಿಗೆ ಕಾರಣವಾಗಿದೆ.
ಸೆಪ್ಟೆಂಬರ್ 14 ರಂದು, ಹತ್ರಾಸ್ ಜಿಲ್ಲೆಯ ಬುಲ್ಗಧಿ ಗ್ರಾಮದಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಇಷ್ಟಕ್ಕೇ ಸುಮ್ಮನಾಗದ ಪಾಪಿಗಳು ಆಕೆಯ ಬೆನ್ನೆಲುಬು ಮುರಿದು ನಾಲಗೆ ಕೂಡ ಕತ್ತರಿಸಿದ್ದರು. ಸೆಪ್ಟೆಂಬರ್ 29ರಂದು ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂದ ಇದೀಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಇದೀಗ ,ಸಂತ್ರಸ್ಥೆಯನ್ನು ಚಿಕಿತ್ಸೆಗಾಗಿ ಕರೆತಂದಾಗ ಜಿಲ್ಲಾಡಳಿತ ಮತ್ತು ಪೊಲೀಸರು ಅವುಗಳ ದೃಶ್ಯಗಳನ್ನು ಚಿತ್ರೀಕರಿಸಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ವಾದಿಸಿದೆ.ಇಲ್ಲಿ ಆಸ್ಪತ್ರೆಯ ಲೋಪ ಎದ್ದು ಕಾಣುತ್ತಿದ್ದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರು ಮತ್ತು ವೈದ್ಯರನ್ನು ಸಿಬಿಐ ತೀವ್ರ ತರಾಟೆಗೆ ತೆಗೆದುಕೊಂಡಿದೆ.