ನವದೆಹಲಿ: ಸಂಬಂಧವೇ ಇಲ್ಲದೆ, ಕಾರಣವೇ ಇಲ್ಲದೆ ವಾರದಲ್ಲೇ ಮೂರು ಜನರನ್ನು ಕೊಂದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ರಾಜಿ (22) ಬಂಧಿತ ಅರೋಪಿ.
ಈ ವ್ಯಕ್ತಿ ನವೆಂಬರ್ 23, 24 ಮತ್ತು 25 ರಂದು ಮೂರು ಜನರನ್ನು ಕೊಂದಿದ್ದಾನೆ. ಸರಣಿ ಹಂತಕ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸರಿಸುಮಾರು 3,000 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆರೋಪಿಯ ಕುರಿತಾದ ಸುಳಿವು ಸಿಕ್ಕಿದ್ದು, ಗುರುಗ್ರಾಮದ ಐಎಫ್ಸಿ ಏಫ್ ಸಿಒ ಚೌಕ್ ಸಮೀಪ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅರೋಪಿ ಒಬ್ಬೊಬ್ಬರ ಕೊಲೆ ಮಾಡಿ, ಏನನ್ನೋ ಸಾಧಿಸಿದವನ ರೀತಿ ಸಂತಸ ಪಟ್ಟಿದ್ದಾನೆ. ಮೂರು ದಿನಗಳಲ್ಲಿ ಮೂರು ಮಂದಿಯನ್ನು ಕೊಂದೆ. ಅವರ್ಯಾರು ಎಂದು ನನಗೆ ತಿಳಿದೇ ಇಲ್ಲ. ಆದರೆ ಅದೆಷ್ಟು ಖುಷಿ ಆಗ್ತಿದೆ ಎಂದರೆ ನನ್ನ ಜೀವನ ಸಾರ್ಥಕವಾಯ್ತು ಎನಿಸುತ್ತೆ. ಈಗ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ನನ್ನ ಉದ್ದೇಶ ಈಡೇರಿದೆ, ಈಗ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.
ಈ ಬಗ್ಗೆ ಹೇಳಿರುವ ಆರೋಪಿ, ನಾನು ಚಿಕ್ಕವನಿದ್ದಾಗ ಏನು ತಿಳಿಯುತ್ತಿರಲಿಲ್ಲ. ನನ್ನ ಪಾಲಕರು ಸೇರಿದಂತೆ ಎಲ್ಲರೂ ನನ್ನನ್ನು ಹಂಗಿಸುತ್ತಿದ್ದರು. ನೀನು ದಡ್ಡ, ನಿನಗೇನೂ ಬರಲ್ಲ. ನೀನು ತುಂಬಾ ದುರ್ಬಲ, ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಇದು ನನ್ನ ತಲೆಯಲ್ಲಿ ತುಂಬಿಕೊಂಡಿತ್ತು. ನಾನೂ ಏನಾದರೂ ಮಾಡಬಲ್ಲೆ ಎಂದು ತೋರಿಸುವ ಹುಚ್ಚು ಹತ್ತಿತ್ತು. ಅದಕ್ಕಾಗಿಯೇ ಹೀಗೆ ಮಾಡಿದೆ ಎಂದಿದ್ದಾನೆ. ಇದನ್ನು ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.