Friday, May 14, 2021
No menu items!
Home Karnataka ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೆಲವೆಡೆ ಚಿಹ್ನೆಗಳ ಬದಲು: ಒಂದು ಕಡೆ ಚುನಾವಣೆಯೇ ಸ್ಥಗಿತ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೆಲವೆಡೆ ಚಿಹ್ನೆಗಳ ಬದಲು: ಒಂದು ಕಡೆ ಚುನಾವಣೆಯೇ ಸ್ಥಗಿತ

ಕಲಬುರಗಿ: ಇಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ಚಿಹ್ನೆ ಅದಲು ಬದಲಾಗೋಗಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಶ್ರೀಚಂದ್ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್ನಲ್ಲಿ ಅಭ್ಯರ್ಥಿಯ ಚಿಹ್ನೆ ಬದಲಾಗಿದೆ. ಹಲ್ಲುಜ್ಜುವ ಪೇಸ್ಟ್ ಬದಲು ಬ್ರಷ್ ಚಿಹ್ನೆ ಮುದ್ರಣವಾಗಿದೆ. ಇದರಿಂದ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು.

ಅಭ್ಯರ್ಥಿ ಗಜಾನಂದ ದತ್ತಾಪ್ರಸಾದ ಎಂಬುವರು ತಮ್ಮ ಪ್ರಚಾರ ಪತ್ರದಲ್ಲಿ ಟೂತ್ ಪೇಸ್ಟ್ ಚಿಹ್ನೆ ಹಾಕಿಕೊಂಡು ಪ್ರಚಾರ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಮತ ಚಲಾಯಿಸಲು ಹೋದ ಮತದಾರರೊಬ್ಬರು ಟೂತ್ ಪೇಸ್ಟ್ ಚಿಹ್ನೆಗಾಗಿ ಗಮನಿಸಿದ್ದಾರೆ. ಚಿಹ್ನೆ ಕಾಣದೆ ದಂಗಾಗಿದ್ದಾರೆ. ಹೊರಗೆ ಬಂದು ಮತದಾರ ಅಭ್ಯರ್ಥಿಗೆ ನೀನು ಟೂತ್ ಪೇಸ್ಟ್ ಗೆ ಮತ ಚಲಾಯಿಸಲು ಹೇಳಿದ್ದು, ಆದರೆ ಅಲ್ಲಿ ಈ ಚಿಹ್ನೆ ಇಲ್ಲ. ಬರಿ ಟೂತ್ ಬ್ರಷ್ ಇದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ರಮೇಶ ಪೆದ್ದೆ, ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಚಿಹ್ನೆ ಸರಿಯಾಗಿದೆ. ಫಾರಂ ಸಂಖ್ಯೆ 10 ರಲ್ಲಿ 139 ಹಲ್ಲುಜ್ಜುವ ಬ್ರಷ್ ಎಂದೇ ನಮೂದಾಗಿದೆ ಎಂದು ಮತಗಟ್ಟೆ ಅಧಿಕಾರಿ ತಿಳಿಸಿದ್ದಾರೆ. ಅಭ್ಯರ್ಥಿ ದೂರು ನೀಡಲಿ ಪರಿಶೀಲಿಸಲಾಗುವುದು. ಚುನಾವಣೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಇತ್ತ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ತುಪ್ಪದೂರ ಗ್ರಾಮದ ಮತಗಟ್ಟೆಯಲ್ಲೂ ಇಂತದ್ದೇ ಘಟನೆ ನಡೆದಿದೆ. ವಾರ್ಡ್ ಸಂಖ್ಯೆ 2 ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ದಮ್ಮ ಅವರು ಮಡಿಕೆ ಚಿಹ್ನೆ ಪಡೆದಿದ್ದರು. ಆದರೆ ಮತಪತ್ರದಲ್ಲಿ ಆಟೊ ಚಿತ್ರ ಮುದ್ರಣವಾಗಿದೆ.

ಕರ್ನಾಟಕದ 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments