ಬೆಂಗಳೂರು: ಫೆಬ್ರವರಿ 3 ರಿಂದ 7 ರವರೆಗೆ ಸಿಲಿಕಾನ್ ಸಿಟಿಯಲ್ಲಿ ಏರ್ ಇಂಡಿಯಾ ಶೋ ನಡೆಯಲಿದೆ. ಏರ್ ಶೋಗೆ ರಕ್ಷಣಾ ಸಚಿವಾಲಯದಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಕೊರೊನಾ ಸಂಖ್ಯೆ ಸ್ವಲ್ಪ ತಗ್ಗಿದ್ದರು ಎರಡನೇ ಅಲೆ ಶುರುವಾಗುವ ಆತಂಕವಿದೆ. ಹೀಗಾಗಿ ಮುನ್ನಚ್ಚರಿಕಾ ಕ್ರಮವಾಗಿ ಒಂದಷ್ಟು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಲಾಗಿದೆ. ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿದ್ದು, ಕೊರೊನಾ ಸಮಯದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ಪಾಲಿಸಬೇಕಾಗಿದೆ.ಹಾಗೆಯೇ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಪರೀಕ್ಷೆ, ಕ್ವಾರಂಟೈನ್ ನಿಯಮಗಳನ್ನು ಘೋಷಿಸಲಾಗಿದೆ. ಏರೋ ಶೋ ಸ್ಥಳದಲ್ಲಿ ಯಾವ್ಯಾವ ನಿಯಮಗಳನ್ನು ಪಾಲಿಸಬೇಕು
ಏನಿದೆ ಮಾರ್ಗಸೂಚಿಯಲ್ಲಿ..?
* ಮಾಸ್ಕ್ ಧರಿಸುವುದು ಕಡ್ಡಾಯ
* ಅಂತರಾಷ್ಟ್ರೀಯ ಪ್ರತಿನಿಧಿಗಳಿಗೆ ಪರೀಕ್ಷೆ, ಕ್ವಾರಂಟೈನ್ ನಿಯಮ ಕಡ್ಡಾಯ
* ರಾಜ್ಯದಲ್ಲಿ 2 ದಿನ ಉಳಿಯುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯ
* ಕೊರೊನಾ ಲಕ್ಷಣಗಳಿದ್ದರೆ ಅವರನ್ನು ಐಸೋಲೇಷನ್ ಗೆ ಒಳಪಡಿಸಲಾಗುತ್ತದೆ
* ಸಿಸಿಟಿವಿ ಕ್ಯಾಮರಾದಿಂದ ಸಾಮಾಜಿಕ ಅಂತರದಿಂದ ಮೇಲೆ ನಿಗಾ ವಹಿಸಲಾಗುವುದು
* ನಾಲ್ಕು ದಿನದ ಮೊದಲು ಕೊರೊನಾ ಪರೀಕ್ಷೆಗೆ ಒಳಪಡಬೇಕು, ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ
* ಟಾಯ್ಲೆಟ್, ವಾಶ ಬೇಸಿನ್ಗಳಲ್ಲಿ ಸೆನ್ಸರ್ ಅಳವಡಿಕೆ
*ಬ್ಯಾಗೇಜ್ ಸ್ಕ್ಯಾನರ್ ಹಾಗೂ ಯುವಿ ಸ್ಯಾನಿಟೈಸೇಷನ್
*ಏರೋ ಶೋಗೆ ಕೆಲವೇ ಕೆಲವು ಮಂದಿಗೆ ಮಾತ್ರ ಅವಕಾಶ