Thursday, April 15, 2021
No menu items!
Home Bharata ಟ್ವಿಟ್ಟರ್ ಗೆ ಖಡಕ್ ಎಚ್ಚರಿಕೆ ಕೊಟ್ಟು, ಸ್ಥಳದ ಬಗ್ಗೆ ಮಾಹಿತಿ ನೀಡಿದ ಭಾರತ..!

ಟ್ವಿಟ್ಟರ್ ಗೆ ಖಡಕ್ ಎಚ್ಚರಿಕೆ ಕೊಟ್ಟು, ಸ್ಥಳದ ಬಗ್ಗೆ ಮಾಹಿತಿ ನೀಡಿದ ಭಾರತ..!

ನವದೆಹಲಿ : ಟ್ವಿಟ್ಟರ್ ನಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದೆ. ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ ಎಂಬಲ್ಲಿ ಲೇಹ್ ನ ಭೂಪ್ರದೇಶವನ್ನು ಟ್ವಿಟರ್ ತೋರಿಸಿದೆ. ಈ ಪ್ರದೇಶದ ಬಗ್ಗೆ ತಪ್ಪು ನಿರೂಪಣೆ ಮಾಡಿದ್ದಕ್ಕಾಗಿ ಟ್ವಿಟ್ಟರ್ ಸಿಇಒ ವಿರುದ್ಧ ಕೇಂದ್ರ ಸರ್ಕಾರ ಗುಡುಗಿದೆ. ಅಲ್ಲದೇ ಭಾರತ ನಕ್ಷೆಯ ಬಗ್ಗೆ ತಪ್ಪಾಗಿ ನಿರೂಪಿಸಿದ್ದಕ್ಕೆ ಖಡಕ್ ಎಚ್ಚರಿಕೆ ಕೂಡ ನೀಡಿದೆ.

ಈ ಕುರಿತಂತೆ ಮಹತ್ವದ ಬೆಳವಣಿಗೆ ಎನ್ನುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾಹ್ನಿ ಅವರು ಟ್ವಿಟರ್ ನ ಸಿಇಒ ಜಾಕ್ ಡೊರ್ಸೆ ಅವರಿಗೆ ಪತ್ರವೊಂದನ್ನು ಬರೆದಿದ್ದು, ಭಾರತದ ಭೂಪಟವನ್ನು ತಪ್ಪಾಗಿ ನಿರೂಪಿತಗೊಳಿಸಲಾಗಿದೆ ಎಂದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಭಾರತೀಯ ನಾಗರಿಕರ ಸೂಕ್ಷ್ಮತೆಯನ್ನು ಗೌರವಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿಗಳು ಟ್ವಿಟರ್ ಗೆ ಮನವಿ ಮಾಡಿದ್ದಾರೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದೆ.

ಭಾರತ ಸರ್ಕಾರದ ಪ್ರತಿನಿಧಿಯು ಈ ರೀತಿ ಮಾಡುವುದು ಕಾನೂನುಬಾಹಿರ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಟ್ವಿಟರ್ ಗೆ ಕಠಿಣ ಎಚ್ಚರಿಕೆ ನೀಡಿರುವ ಸಾವ್ನೆ, ಇಂತಹ ಘಟನೆ ಟ್ವಿಟರ್ ನಲ್ಲಿ ಅಸಮಾಧಾನವನ್ನು ಉಂಟುಮಾಡುತ್ತದೆ. ಅದರ ತಟಸ್ಥತೆ ಮತ್ತು ನ್ಯಾಯೋಚಿತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಲೇಹ್ ಲಡಾಖ್ ಕೇಂದ್ರಾಡಳಿತ ಪ್ರದೇಶದ ಕೇಂದ್ರ ಸ್ಥಾನವಾಗಿದ್ದು, ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಎರಡೂ ಭಾರತದ ಸಂವಿಧಾನದಿಂದ ನಿಯಂತ್ರಿಸಲ್ಪಡುವ ಅವಿಭಾಜ್ಯ ಅಂಗಗಳು ಎಂದು ಕಾರ್ಯದರ್ಶಿ ಐಟಿ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಬಗ್ಗೆ ಬೆಳಕು ಚೆಲ್ಲಿರುವ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ, ‘ನಾನು ಈ ಅಸಂಗತತೆಯನ್ನು ಎತ್ತಿ ತೋರಿಸಿದ ನಂತರ ಸರ್ಕಾರ ಈಗ ಪತ್ರ ಬರೆದಿದೆ. ಎಲ್ಲ ಸಮಸ್ಯೆಗಳನ್ನು ಟ್ವಿಟರ್ ಸರಿಪಡಿಸಿಕೊಳ್ಳಲು ಇದು ಸಕಾಲ. ಭಾನುವಾರ ಅವರು ಲೇಹ್ ಅನ್ನು ಚೀನಾದ ಭಾಗವಾಗಿ ತೋರಿಸಿದರು ಮತ್ತು ಸೋಮವಾರ ಅವರು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ಲೇಹ್ ಅನ್ನು ತೋರಿಸಿದರು ಅದು ತಪ್ಪು. ಲೇಹ್ ಈಗ ಲಡಾಖ್ ನ ಯುಟಿಯ ಭಾಗವಾಗಿದೆ ಎಂದಿದ್ದಾರೆ.

ಲೇಹ್ ಕೇಂದ್ರಾಡಳಿತ ಪ್ರದೇಶವಾದ ಲಡಾಕ್ ನ ಹೆಡ್ ಕ್ವಾರ್ಟರ್. ಹಾಗೇ ಲಡಾಕ್ ಹಾಗೂ ಜಮ್ಮು ಕಾಶ್ಮೀರ ಎರಡು ಅವಿಭಾಜ್ಯ ಅಂಗಗಳು ಎಂದು ಟ್ವಿಟ್ಟರ್ ಗೆ ಸ್ಪಷ್ಟಪಡಿಸಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...

Recent Comments