ಚೆನ್ನೈ: ಅಡುಗೆ ಎಂದಾಕ್ಷಣಾ ಸುಮಾರು ಜನ ಮೂಗು ಮುರಿಯುತ್ತಾರೆ. ಹೇಗಪ್ಪ ಅಡುಗೆ ಮಾಡೋದು, ಏನೆಲ್ಲಾ ಮಾಡೋದಪ್ಪ ಅನ್ನೋ ಚಿಂತೆಗೀಡಾಗುತ್ತಾರೆ. ಅದ್ರೆ ಇಲ್ಲೊಬ್ಬ ಬಾಲಕಿ ಆ ಎಲ್ಲರನ್ನು ನಾಚಿಸುವಂತೆ ಮಾಡಿದ್ದಾಳೆ. ಲಾಕ್ ಡೌನ್ ಸಮಯವನ್ನು ಈ ಬಾಲಕಿ ಅಡುಗೆ ಕಲಿಯುವುದಕ್ಕೆ ಉಪಯೋಗಿಸಿಕೊಂಡಿದ್ದಾಳೆ. ಈ ರೀತಿ ಕಲಿತು ಆ ಬಾಲಕಿ ಮಾಡಿದ ಅಡುಗೆ ಬಗ್ಗೆ ಕೇಳಿದ್ರೆ ಎಲ್ಲರೂ ಒಂದು ಕ್ಷಣ ಶಾಕ್ ಅಗ್ತೀರಾ.
ಪ್ರತಿದಿನ ಅಡುಗೆ ಮಾಡುವವರೇ ಅಡುಗೆ ಮಾಡಿದ್ರೆ ಒಮ್ಮೆಗೆ ನಾಲ್ಕೈದು ವೆರೈಟೀಸ್ ಆಫ್ ಅಡುಗೆಯನ್ನು ಮಾಡಬಹುದು. ಆದ್ರೆ ಈ ಪುಟ್ಟ ಬಾಲಕಿ ಎಸ್ ಎನ್ ಲಕ್ಷ್ಮೀ ಸಾಯಿಶ್ರೀ ಕೇವಲ 58 ನಿಮಿಷಗಳಲ್ಲಿ 46 ತಿನಿಸು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿರುವಂತೆ ಮಾಡಿದ್ದಾಳೆ. ಅಷ್ಟೇ ಅಲ್ಲ ಪಾಕಶಾಸ್ತ್ರದ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಸ್ತಕ ಸೇರಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಆ ಬಾಲಕಿ ಅಮ್ಮ ಬೇರೆ ಬೇರೆ ರೀತಿ ಅಡುಗೆ ಮಾಡುತ್ತಿದ್ದರು. ಮೊದಲು ನನಗೆ ಅದನ್ನೆಲ್ಲಾ ಕಲಿಯಲು ಸಮಯ ಇರಲಿಲ್ಲ. ಆದರೆ ಲಾಕ್ಡೌನ್ನಿಂದಾಗಿ ಮನೆಯಲ್ಲಿಯೇ ಇರುವಂತಾಯಿತು. ಆಗ ನಾನು ಅಮ್ಮನ ಬಳಿ ಅಡುಗೆ ಮಾಡುವುದನ್ನು ಕಲಿತೆ. ಆದರೆ ಇಷ್ಟೆಲ್ಲಾ ಅಡುಗೆ ಮಾಡುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ ಎಂದಿದ್ದಾಳೆ.
ಕೇರಳದ 10 ವರ್ಷದ ಬಾಲಕಿ ಸಾನ್ವಿ 30 ಅಡುಗೆ ಮಾಡಿರುವ ಬಗ್ಗೆ ಈಕೆಯ ತಂದೆ ಎಲ್ಲೋ ಓದಿದ್ದರಂತೆ. ಮಗಳು ತುಂಬಾ ಫಾಸ್ಟ್ ಆಗಿ ಅಡುಗೆ ಮಾಡುವುದು ನೋಡಿ ಏಕೆ ಇನ್ನಷ್ಟು ಉತ್ತೇಜನ ನೀಡಬಾರದು ಎಂದು ಎನ್ನಿಸಿದೆ. ಅದಕ್ಕಾಗಿಯೇ ಸಾನ್ವಿಯ ದಾಖಲೆಯನ್ನು ತಮ್ಮ ಮಗಳು ಸುಲಭದಲ್ಲಿ ಮುರಿಯಬಹುದು ಎಂದು ಎನ್ನಿಸಿ ಇನ್ನಷ್ಟು ಬೇಗ ಬೇಗೆ ಹೆಚ್ಚೆಚ್ಚು ಅಡುಗೆಯ ಜತೆಗೆ ರುಚಿಯಾಗಿರುವ ಅಡುಗೆ ಮಾಡಲು ಪ್ರೇರೇಪಿಸಿದ್ದಾರೆ.
ಅಪ್ಪನ ಪ್ರೇರಣೆ, ಅಮ್ಮನ ಸಪೋರ್ಟ್ ನಿಂದ ಲಕ್ಷ್ಮೀ ಇಷ್ಟೊಂದು ಅಡುಗೆ ಮಾಡಿ ದಾಖಲೆ ಮಾಡಿದ್ದಾಳೆ. ಅಷ್ಟೇ ಅಲ್ಲ ಎಲ್ಲರೂ ಭೇಷ್ ಎಂದಿದ್ದಾರೆ. ಲಾಕ್ ಡೌನ್ ನಂತ ಸಮಯವನ್ನು ಹೀಗು ಉಪಯೋಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾಳೆ ಈ ಬಾಲೆ.
Tamil Nadu: A girl entered UNICO Book Of World Records by cooking 46 dishes in 58 minutes in Chennai yesterday. SN Lakshmi Sai Sri said, "I learnt cooking from my mother. I am very happy". pic.twitter.com/AmZ60HWvYX
— ANI (@ANI) December 15, 2020