ಕೊಡಗು : ಸಲಿಂಗ ಮದುವೆಯನ್ನು ಈಗಾಗಲೇ ಅನೇಕ ದೇಶಗಳು ಒಪ್ಪಿಕೊಂಡಿವೆ. ಇದನ್ನು ಕಾನುನು ಕೂಡ ಒಪ್ಪಿಕೊಂಡಿದೆ. ಇಷ್ಟ ಪಟ್ಟರೆ ಸಲಿಂಗ ಮದುವೆಯಾಗುವುದಕ್ಕೆ ಯಾರಿಗೂ ವಿರೋಧವಿಲ್ಲ. ಆದರೇ ಸಮಾಜದಲ್ಲಿ ಅಂತ ಮದುವೆಗಳಿಗೆ ಟೀಕೆ ಟಿಪ್ಪಣಿಗಳು ಹೆಚ್ಚಾಗಿ ಕೇಳಿ ಬರುತ್ತವೆ. ವಿದೇಶಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದ ಸಲಿಂಗ ಮದುವೆ ಇದೀಗ ನಮ್ಮ ರಾಜ್ಯದಲ್ಲೇ ನಡೆದಿದೆ.

ಹೌದು, ಕೊಡಗಿನಲ್ಲಿ ಈ ರೀತಿಯ ಮದುವೆಯೊಂದು ನಡೆದಿದ್ದು, ಅದರಲ್ಲೂ ಕೊಡಗಿನ ಸಂಪ್ರದಾಯದಂತೆ ನಡೆದಿದೆ. ಕೊಡಗಿನ ಯುವಕ ಶರತ್ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬ ಯುವಕರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.

ಕಳೆದ 10 ವರ್ಷಗಳಿಂದ ಶರತ್ ವಿದೇಶದಲ್ಲಿ ನೆಲೆಸಿದ್ದರು. ಸೆಪ್ಟಂಬರ್ ನಲ್ಲಿ ಶರತ್ ಹಾಗೂ ಸಂದೀಪ್ ಮದುವೆ ನಡೆದಿದೆ. ನಂತರ ಕೊಡಗಿಗೆ ಬಂದ ಶರತ್ ಹಾಗೂ ಸಂದೀಪ್, ಮನೆಯವರನ್ನು ಒಪ್ಪಿಸಿ ಕೊಡವ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾಗಿದ್ದಾರೆ. ಕೊಡವ ಸಂಪ್ರದಾಯದ ಉಡುಗೊರೆಯುಟ್ಟು, ವಾಲಗ ಸದ್ದಿನೊಂದಿಗೆ ಮದುವೆಯಾಗಿದ್ದಾರೆ. ಆದ್ರೆ ಇವರಿಬ್ಬರ ಮದುವೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಕೇಳಿ ಬಂದಿದೆ.