Monday, March 8, 2021
No menu items!
Home Latest ಅಮೇರಿಕಾದ ಮಾಲ್ ನಲ್ಲಿ ಗುಂಡಿನ ಚಕಮಕಿ: ಎಂಟು ಮಂದಿಗೆ ಗಾಯ

ಅಮೇರಿಕಾದ ಮಾಲ್ ನಲ್ಲಿ ಗುಂಡಿನ ಚಕಮಕಿ: ಎಂಟು ಮಂದಿಗೆ ಗಾಯ

ವಾಷಿಂಗ್ಟನ್: ಅಮೇರಿಕಾದ ಮಾಲ್ ಒಂದರಲ್ಲಿ ಗುಂಡಿನ ಚಕಮಕಿ ನಡೆದಿದ್ದು ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ. ಗುಂಡು ಹಾರಿಸಿದ ದಾಳಿಕೋರನನ್ನ ಬಂಧಿಸುವಲ್ಲಿ ಸದ್ಯ ಪೊಲೀಸರು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.

ಅಮೇರಿಕಾದ ವಿಸ್ಕಾನ್ಸಿನ್‌ನ ಮಿಲ್ವಾಕಿ ಯಲ್ಲಿರುವ ಮೇಫೀಲ್ಡ್ ಶಾಪಿಂಗ್ ಮಾಲ್‌ನಲ್ಲಿ ಈ ಹಠಾತ್ ಗುಂಡಿನ ಚಕಮಕಿ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಈವರೆಗೆ 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಶೂಟೌಟ್‌ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಸ್ಥಳೀಯ ಮೇಯರ್ ಡೆನ್ನಿಸ್ ಮೆಕ್‌ಬ್ರೈಡ್ ಅವರು ಸ್ಪಷ್ಟಪಡಿಸಿದ್ದಾರೆ

ಘಟನೆ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಆದರೆ ಅದಾಗಲೇ ದಾಳಿಕೋರ ತಪ್ಪಿಸಿಕೊಂಡಿದ್ದಾನೆ. ಸ್ಥಳೀಯರೊಬ್ಬರು ಹೇಳುವ ಪ್ರಕಾರ ನನ್ನ ಸಹೋದರಿ ಸುಮಾರು 15 ಬಾರಿ ಗುಂಡಿನ ಶಬ್ದವನ್ನ ಕೇಳಿಸಿಕೊಂಡಿದ್ದಾಳೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಪೊಲೀಸರು ಸ್ಥಳವನ್ನ ಸುತ್ತುವರೆದಿದ್ದರು ಎಂದು ಹೇಳಿದ್ದಾರೆ.ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ಕೆಲ ತುಣುಕುಗಳು ಲಭ್ಯವಾಗಿದ್ದು ಗಾಯಾಳಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ದೃಶ್ಯಾವಳಿಗಳು ಕಾಣಸಿಗುತ್ತಿವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಇದೀಗ ದಾಳಿಕೋರನನ್ನು ಹಿಡಿಯಲು ಸ್ಥಳದಲ್ಲಿದ್ದ ಇತರ ವ್ಯಕ್ತಿಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಪೊಲೀಸರಿಗೆ ದೊರಕಿರುವ ಮಾಹಿತಿ ಪ್ರಕಾರ ಶೂಟರ್‌ನ ವಯಸ್ಸು ಸುಮಾರು 20 ರಿಂದ 30 ವರ್ಷ ಎಂದು ತಿಳಿದುಬಂದಿದೆ. ಇದಲ್ಲದೆ ಸುತ್ತಮುತ್ತಲಿನ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕಲಾಗುತ್ತಿದೆ. ಶೀಘ್ರವೇ ದಾಳಿಕೋರರನ್ನು ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

How to Buy Essay Online Cheap

Purchase essay to get better marks and evenings free from assignmentsStudents have long been tired of continuous homework and they are certainly not satisfied...

Buy Essay – How to Make Sure Your Essay is Correct

When you're looking for essay help, there are plenty of services you can purchase online Some are free, while others charge a small...

Who Can Offer Cheap Essays?

But, there are lots of advantages that you are able to derive from purchasing essay papers online. Primarily, when you purchase essay papers online,...

How to Write My Essay To Money

Finding a trustworthy and professional man for essay editing help is tough than writing a thesis It takes a keen sense of observation...

Recent Comments