ಚಿತ್ರದುರ್ಗ : ಚಲಿಸುತ್ತಿದ್ದ ಕಂಟೇನರ್ ಲಾರಿಯೊಂದಕ್ಕೆ ಪೇಂಟ್ ತುಂಬಿದ್ದ ಲಾರಿಯೊಂದು ಹಿಂಬದಿಯಿಂದ ಬಂದು ಗುದ್ದಿದ ಪರಿಣಾಮ ಪೇಂಟ್ ತುಂಬಿದ್ದ ಲಾರಿ ಹೊತ್ತಿ ಉರಿದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡಲಹಳ್ಳಿ -ಗೋರಲಡುಕು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.ಲಾರಿಯಲ್ಲಿ ಏಶಿಯನ್ ಪೇಂಟ್ ಡಬ್ಬಗಳಿದ್ದು ಅಪಾರ ಪ್ರಮಾಣದ ಪೇಂಟ್ ಹಾನಿಯಾಗಿದೆ.
ಹೊತ್ತಿ ಉರಿದ ಲಾರಿ ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪೇಂಟ್ ತುಂಬಿದ್ದ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಡ್ರೈವರ್ ಮತ್ತು ಕ್ಲೀನರ್ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ.