ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಈ ಬಗ್ಗೆ ಸ್ವತಃ ಸಂತೋಷ್ ಅವರೇ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಹುಷಾರಾಗಿ ಇರುವಂತೆ ಸೂಚನೆ ನೀಡಿದ್ದಾರೆ.
ಸಂತೋಷ್ ಹೆಸರಿನ ಈ ನಕಲಿ ಖಾತೆಯಲ್ಲಿ ಅವರ ವರ್ಜಿನಲ್ ಖಾತೆಯ ಚಿತ್ರವನ್ನೇ ಬಳಸಿಕೊಳ್ಳಲಾಗಿದೆ. ಹೀಗಾಗಿ ನಕಲಿ ಖಾತೆಯೂ ಅಸಲಿ ಖಾತೆಯಂತೆಯೇ ಕಾಣುತ್ತಿದೆ. ಈ ಖಾತೆಯ ಮೂಲಕ ಸಂತೋಷ್ ಅವರ ಸ್ನೇಹಿತರು ಕಾಂಟ್ಯಾಕ್ಟ್ ಮಾಡುತ್ತಿರುವ ಕಿಡಿಗೇಡಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ. ನನಗೆ ತುರ್ತಾಗಿ ಹದಿನೈದು ಸಾವಿರ ಹಣ ಬೇಕಿದೆ. ಎರಡೇ ತಾಸಿನಲ್ಲಿ ಹಿಂದಿರುಗಿಸುತ್ತೇನೆ ಎಂದು ಮೆಸೆಂಜರ್ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಸಂತೋಷ್ ಅವರು, ನನ್ನ ಹೆಸರಿನಲ್ಲಿ ನಕಲಿ ಖಾತೆ ಅಥವಾ ಕ್ಲೋನ್ ಖಾತೆಯನ್ನು ರಚಿಸಲಾಗಿದೆ. ಇದನ್ನು ತಿಳಿಯದ ಅನೇಕ ಮಂದಿ ನಾನೇ ಎಂದು ತಿಳಿದುಕೊಂಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ದಯವಿಟ್ಟು ಇದನ್ನು ನಂಬಬೇಡಿ, ಹುಷಾರಾಗಿರಿ ಎಂದು ಹೇಳಿದ್ದಾರೆ.