ಬೆಂಗಳೂರು : ಕೊರೋನಾ ಸದ್ಯಕ್ಕೆ ತನ್ನ ನಾಗಾಲೋಟವನ್ನ ನಿಲ್ಲಿಸುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಇದೀಗ ರಾಜ್ಯದ ಮಾಜಿ ಸಿಎಂ , ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರಿಗೂ ಕೊರೋನಾ ಪಾಸಿಟಿವ್ ರಿಸಲ್ಟ್ ಬಂದಿದೆ. ಈ ಕುರಿತು ಸ್ವತಃ ಟ್ಟೀಟ್ ಮಾಡಿರುವ ಕೇಂದ್ರ ಸಚಿವರು ತಮಗೆ ಕೊರೋನಾ ಪಾಸಿಟಿವ್ ಇರುವುದನ್ನ ಬಹಿರಂಗಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿವಿಎಸ್ ‘ ಕೋವಿಡ್ 19 ನ ಆರಂಭಿಕ ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷಿಸಿಕೊಂಡಾಗ ಕೊರೋನಾ ಪಾಸಿಟಿವ್ ಇರುವುದು ತಿಳಿದು ಬಂದಿದೆ. ಸದ್ಯ ನಾನು ಕ್ವಾರಂಟೈನ್ ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಜಾಗರೂಕರಾಗಿರಿ ಮತ್ತು ಪ್ರೊಟೋಕಾಲ್ ಅನ್ನು ಅನುಸರಿಸಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ.ಎಲ್ಲರೂ ಸುರಕ್ಷಿತರಾಗಿರಿ’ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಾಗಿರುವ ಡಿ.ವಿ ಸದಾನಂದ ಗೌಡ ಅವರು ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೋ ಅಥವಾ ತಮ್ಮ ನಿವಾಸದಲ್ಲೇ ಉಳಿದುಕೊಳ್ಳುತ್ತಾರೋ ಎಂಬುದು ಇನ್ನೂ ಬಹಿರಂಗಪಡಿಸಿಲ್ಲ. ಇದರ ಜೊತೆ ಮಾಜಿ ರಕ್ಷಣಾ ಸಚಿವ ಎ.ಕೆ ಆ್ಯಂಟನಿ ಮತ್ತವರ ಪತ್ನಿಗೂ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.