Friday, September 24, 2021
No menu items!
Home Latest ಟ್ರಂಪ್ ಪ್ರಚಾರದಿಂದಲೇ 30000 ಜನರಿಗೆ ಕೊರೋನಾ ಸೋಂಕು: ಸ್ಫೋಟಕ ಸತ್ಯ ಬಿಚ್ಚಿಟ್ಟ ವರದಿ….!

ಟ್ರಂಪ್ ಪ್ರಚಾರದಿಂದಲೇ 30000 ಜನರಿಗೆ ಕೊರೋನಾ ಸೋಂಕು: ಸ್ಫೋಟಕ ಸತ್ಯ ಬಿಚ್ಚಿಟ್ಟ ವರದಿ….!

ಅಮೇರಿಕ : ಕೋವಿಡ್ 19 ವೈರಸ್ ದಾಳಿಗೆ ಅತೀ ಹೆಚ್ಚು ನಲುಗಿದ ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕವೂ ಒಂದು. ಆದರೆ ಅಮೇರಿಕಾದಲ್ಲಿ ಕೊರೋನಾ ವೈರಸ್ ಅಷ್ಟೊಂದು ವೇಗವಾಗಿ ಹೇಗೆ ಹರಡಿತು ಎನ್ನುವುದಕ್ಕೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ವರದಿಯೊಂದನ್ನ ಸಿದ್ಧಪಡಿಸಿದ್ದು , ಆ ವರದಿ ಎಲ್ಲರನ್ನ ಇದೀಗ ಬೆಚ್ಚಿಬೀಳಿಸಿದೆ.

ವರದಿಯಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಚುನಾವಣಾ ರ್ಯಾಲಿಗಳೇ ಕೊರೋನಾ ವೈರಸ್ ಹಬ್ಬಲು ಪ್ರಮುಖ ಕಾರಣ ಎಂದಿರುವ ವರದಿ , ಈ ಚುನಾವಣಾ ಪ್ರಚಾರದಿಂದಾಗಿ ಸುಮಾರು 30,000 ಮಂದಿಗೆ ಸೋಂಕು ತಗುಲಿ , 700 ಮಂದಿ ಬಲಿಯಾಗಿದ್ದಾರೆ ಎಂದು ಉಲ್ಲೇಖಿಸಿದೆ.

ಜೂನ್ 20 ರಿಂದ ಸೆಪ್ಟೆಂಬರ್ 22 ರ ನಡುವೆ ಅಮೇರಿಕ ಅಧ್ಯಕ್ಷರು ಸುಮಾರು 18 ಚುನಾವಣಾ ರ್ಯಾಲಿಗಳಲ್ಲಿ ಭಾಗಿಯಾಗಿದ್ದರು . ಈ ರ್ಯಾಲಿಗಳು ಕೊರೋನಾ ಸೋಂಕು ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಮತ್ತು ಸುಮಾರು 700 ಜನರ ಪ್ರಾಣಬಲಿಗೂ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ವರದಿ ಸಿದ್ದಪಡಿಸಿದ್ದು ಇದೀಗ ವರದಿ ವೈರಲ್ ಆಗತೊಡಗಿದೆ. ಇದೇ ಸಮಯದಲ್ಲಿ ಸಮೀಕ್ಷೆ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ‘ ಅಧ್ಯಕ್ಷ ರಾದ ಡೊನಾಲ್ಡ್ ಟ್ರಂಪ್ ಅವರಿಗೆ ನಮ್ಮ ಬಗ್ಗೆಯಂತೂ ಕಾಳಜಿ ಇಲ್ಲ, ಕನಿಷ್ಠ ತಮ್ಮ ಬೆಂಬಲಿಗರ ಬಗ್ಗೆಯೂ ಕಾಳಜಿ
ವಹಿಸದೇ ಇರುವಂತಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಮೇರಿಕಾ ದಲ್ಲಿ ಕೊರೋನಾ ವೈರಸ್ ಹಾವಳಿ ಮಿತಿ ಮೀರಿದ್ದು ಸುಮಾರು 2,36,077 ಮಂದಿ ಇದೀಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಅಮೇರಿಕಾದಲ್ಲಿ 31,04,196 ಸಕ್ರಿಯ ಸೋಂಕಿತರು ಇರುವುದಾಗಿ ವರದಿಯಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments