ಚಾಮರಾಜನಗರ : ನಟ ಧನ್ವೀರ್ ಇಂದು ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಅರಣ್ಯ ಇಲಾಖೆ ಕಚೇರಿಗೆ ಹೋಗಿ ವಿಚಾರಣೆಗೆ ಹಾಜರಾಗಿದ್ದಾರೆ.
ಧನ್ವೀರ್ ಕಾನೂನನ್ನು ಮೀರಿ ರಾತ್ರಿ ಸಫಾರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ವಿಚಾರಣೆ ನಡೆಸಿದ್ದಾರೆ.
ನಟ ಧನ್ವೀರ್ ಮತ್ತು ಅವರ ಸ್ನೇಹಿತರು ಸೇರಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಸಫಾರಿ ಮಾಡಿದ್ದಾರೆ. ಆ ಬಗ್ಗೆ ನಿನ್ನೆ ವಿಡಿಯೋ ವೊಂದು ವೈರಲ್ ಆಗಿತ್ತು. ಧನ್ವೀರ್ ಹುಲಿಯನ್ನು ನೋಡಿ ಸಂತಸ ಪಟ್ಟು ಮೊಬೈಲ್ ನಲ್ಲಿ ಆ ವಿಡಿಯೋ ಸೆರೆಹಿಡಿಯುತ್ತಿದ್ದರು. ಆ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಆಕ್ರೋಸಭರಿತರಾಗಿದ್ದರು. ರಾತ್ರಿ ಸಮಯ ಸಫಾರಿ ಮಾಡುವುದಕ್ಕೆ ಅನುಮತಿ ಇಲ್ಲದಿದ್ದರು ನಟನಿಗೆ ಮಾತ್ರ ಅನುಮತಿ ಸಿಕಿದ್ಯಾ ಎಂಬ ಪ್ರಶ್ನೆಗಳನ್ನ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂಬಂಧ ಧನ್ವಿರ್ ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹೇಳಿದ್ದ ಹಿನ್ನೆಲೆ ಇಂದು ಧನ್ವೀರ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.