ನಟ ಧನ್ವೀರ್ ರಾತ್ರಿ ಹೊತ್ತು ಅರಣ್ಯಾ ಪ್ರದೇಶದಲ್ಲಿ ಸಫಾರಿ ಮಾಡಿ, ವಿವಾದಕ್ಕೆ ಸಿಲುಕಿದ್ದಾರೆ. ಅರಣ್ಯದಲ್ಲಿ ಓಡಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಿಂದ ಧನ್ವೀರ್ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾತ್ರಿ ಸಫಾರಿಗೆ ಅವಕಾಶ ಇಲ್ಲದಿದ್ದರು, ಕಾನೂನು ಬಾಹಿರವಾಗಿ ಸಫಾರಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅವಕಾಶ ಇಲ್ಲದಿದ್ದರು ನಟ ಸಫಾರಿ ಮಾಡಲು ಹೇಗೆ ಸಾಧ್ಯ..? ಸಫಾರಿಗೆ ಸಮಯ ನಿಗದಿ ಮಾಡಲಾಗಿದೆ, ಆದ್ರೆ ನಟನಿಗೆ ಮಾತ್ರ ಇಷ್ಟ ಬಂದಾಗ ಸಫಾರಿ ಮಾಡಲು ಬಿಡಬಹುದಾ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ ಬಾಲಚಂದ್ರ, ನಟ ಧನ್ವೀರ್ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ಸಫಾರಿ ನಡೆಸಿರುವುದು ನಿಜವಾದರೆ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ.
ಇನ್ನು ಈ ಬಗ್ಗೆ ನಟ ಧನ್ವೀರ್ ಪ್ರತಿಕ್ರಿಯೆ ನೀಡಿದ್ದು, ನಾನು ಬೆಳಗಿನ ಜಾವ 4.30 ರಿಂದ 6.30 ರ ಸಮಯದಲ್ಲಿ ಸಫಾರಿಗೆ ಹೋಗಿದ್ದೆ. ಇಡೀ ಕಾಡು ಸುತ್ತಿದ್ರು ಏನು ನೋಡೋಕೆ ಆಗಲಿಲ್ಲ. ಕೊನೆಗೆ ವಾಪಾಸ್ಸಾಗುವಾಗ ನಮ್ಮ ವಾಹನ ಮುಂದೆ ಹುಲಿ ಬಂತು. ಆ ವಿಡಿಯೋವನ್ನ ಸೆರೆ ಹಿಡಿದದ್ದು ಅಷ್ಟೇ. ನಾನು ರಾತ್ರಿ ಸಫಾರಿಯನ್ನು ಮಾಡಿಲ್ಲ. ಸರ್ಕಾರ ನೀಡಿರುವ ಸಮಯದಲ್ಲೇ ಸಫಾರಿ ಮಾಡಿದ್ದೇನೆ ಎಂದಿದ್ದಾರೆ.