Monday, October 18, 2021
No menu items!
Home Bharata ಮುಂಬೈ ಜೊತೆ ಸೆಣೆಸಲು ಇಂದು ಡೆಲ್ಲಿ-ಹೈದ್ರಾಬಾದ್ ಕಾದಾಟ

ಮುಂಬೈ ಜೊತೆ ಸೆಣೆಸಲು ಇಂದು ಡೆಲ್ಲಿ-ಹೈದ್ರಾಬಾದ್ ಕಾದಾಟ

ದುಬೈ: 13 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಘಟ್ಟದತ್ತ ತಲುಪಿದೆ. ಇನ್ನೇನಿದ್ದರು ಕೇವಲ ಎರಡೇ ಪಂದ್ಯಗಳಷ್ಟೇ ಬಾಕಿ ಇರುವ ಐಪಿಎಲ್ ನಲ್ಲಿ ಫೈನಲ್‌ ಗೇರಲು ಇಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಸೆಣಸಾಡಲಿವೆ.

ಡೆಲ್ಲಿ ತಂಡ ಟೂರ್ನಿಯಲ್ಲಿ ಆಡಿದ ಕೊನೆಯ 6 ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡು ಪರದಾಡುತ್ತಿದ್ದರೆ, ಸನ್‌ರೈಸರ್ಸ್‌ ತಂಡ ಕೊನೆಯ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗುತ್ತಿದೆ. ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಗೆದ್ದ ವಿಶ್ವಾಸವನ್ನು ಡೇವಿಡ್ ವಾರ್ನರ್ ಸಾರಥ್ಯದ ಹೈದ್ರಾಬಾದ್ ತಂಡ ಹೊಂದಿದೆ. ಆದರೆ ಡೆಲ್ಲಿ ತಂಡ ಲೀಗ್ ಹಂತದಲ್ಲಿ ಒಟ್ಟಾರೆ 8 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು ಎನ್ನುವುದೂ ಗಮನಾರ್ಹ .

ಆರಂಭದಲ್ಲಿ ಅಬ್ಬರಿಸಿ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಬೀಗಿದ್ದ ಡೆಲ್ಲಿ, ಲೀಗ್‌ ಹಂತದ 10ನೇ ಪಂದ್ಯದಿಂದ ಲಯ ಕಳೆದುಕೊಂಡು ಪರದಾಡುತ್ತಿದೆ. ತಂಡದ ಅಗ್ರ ಕ್ರಮಾಂಕ ಸ್ಥಿರತೆ ಕಾಪಾಡಿಕೊಂಡಿಲ್ಲ. ಧವನ್‌, ಪೃಥ್ವಿ ಶಾ, ಅಜಿಂಕ್ಯ ರಹಾನೆ ಕೆಲವೊಮ್ಮೆ ಕೈಕೊಡುತ್ತಿದ್ದಾರೆ. ಅಗ್ರ 3 ಬ್ಯಾಟ್ಸ್‌ಮನ್‌ಗಳು ಒಟ್ಟು 9 ಬಾರಿ ಸೊನ್ನೆಗೆ ಔಟಾಗಿದ್ದಾರೆ. ನಾಯಕ ಶ್ರೇಯಸ್‌ ಅಯ್ಯರ್‌ ತಮ್ಮ ಮೇಲಿರುವ ಒತ್ತಡದಿಂದಾಗಿ ಆಕ್ರಮಣಕಾರಿ ಆಟವಾಡಲು ಸಾಧ್ಯವಾಗುತ್ತಿಲ್ಲ. ರಿಷಭ್‌ ಪಂತ್‌ ತಮ್ಮ ಕಳಪೆ ಲಯ ಮುಂದುವರಿಸಿದ್ದು, ತಂಡದ ತಲೆನೋವು ಹೆಚ್ಚಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಕಂಡರೆ ಮಾತ್ರ ಡೆಲ್ಲಿ ತಂಡದ ಮೊದಲ ಬಾರಿಗೆ ಫೈನಲ್ ಗೇರುವ ಕನಸು ನನಸಾಗಲಿದೆ.

ಎದುರಾಳಿ ಡೆಲ್ಲಿಗೆ ಹೋಲಿಸಿದರೆ ತಂಡ ಅತ್ಯುತ್ತಮ ಲಯದಲ್ಲಿದೆ. ನಾಯಕ ಡೇವಿಡ್‌ ವಾರ್ನರ್‌ ತಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ವಾರ್ನರ್‌, ವಿಲಿಯಮ್ಸನ್‌, ಪಾಂಡೆ ಬ್ಯಾಟಿಂಗ್‌ ಆಧಾರ ಸ್ತಂಭವಾದರೆ, ಸಂದೀಪ್‌ ಶರ್ಮಾ, ಟಿ.ನಟರಾಜನ್‌, ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಅಸಾಧಾರಣ ಯಶಸ್ಸು ಕಾಣುತ್ತಿದ್ದಾರೆ. ಮಿಚೆಲ್‌ ಮಾರ್ಶ್ ಗಾಯಗೊಂಡು ಹೊರಬಿದ್ದಿದ್ದರಿಂದ ಅವರ ಬದಲು ತಂಡ ಸೇರಿಕೊಂಡ ವಿಂಡೀಸ್‌ನ ಜೇಸನ್‌ ಹೋಲ್ಡರ್‌, ಸನ್‌ರೈಸ​ರ್ಸ್ ಅದೃಷ್ಟ ಬದಲಿಸುತ್ತಿದ್ದಾರೆ. ಅವರ ಆಲ್ರೌಂಡ್‌ ಪ್ರದರ್ಶನ ತಂಡ ಫೈನಲ್‌ ಹೊಸ್ತಿಲು ತಲುಪಲು ಪ್ರಮುಖ ಕಾರಣಗಳಲ್ಲಿ ಒಂದು.

ಇಂದು ಗೆದ್ದ ತಂಡ ಫೈನಲ್‌ ನಲ್ಲಿ ಪ್ರಚಂಡ ಫಾರ್ಮ್ ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಲಿದೆ. ಅಬುದಾಭಿ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದ್ದು ಇದು ನಿಧಾನಗತಿಯ ಪಿಚ್ ಆಗಿರುವುದರಿಂದ ಮೊದಲು ಬ್ಯಾಟ್ ಮಾಡುವ ತಂಡ 160ಕ್ಕಿಂತ ಹೆಚ್ಚಿನ ರನ್ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments