ನ್ಯೂಯಾರ್ಕ್ : ತಂದೆ ಅಂದ್ರೆ ಆಕಾಶ, ತಂದೆ ಅಂದ್ರೆ ಬೆಟ್ಟದಷ್ಟು ಪ್ರೀತಿ ಇರುತ್ತೆ. ಮಕ್ಕಳಿಗೆ ತಂದೆಯೇ ಹೀರೋ, ತಂದೆಗೂ ಮಗಳೆಂದರೆ ಇನ್ನಿಲ್ಲದ ಪ್ರೀತಿ, ಮಮತೆ. ಆ ಮಗಳಲ್ಲಿ ತಂದೆಯಾದವನು ತನ್ನ ತಾಯಿಯನ್ನ ಕಾಣ್ತಾನೆ. ಆದ್ರೆ ಇಲ್ಲೊಬ್ಬ ಪಾಪಿ ತಂದೆ ಅದಕ್ಕೆ ವಿರುದ್ಧವಾಗಿದ್ದಾನೆ. ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿ, ಉಸಿರು ನಿಲ್ಲಿಸಿದ್ದಾನೆ.

ಆ ಹೆಣ್ಣು ಮಗುವಿಗೆ ಕೇವಲ 10 ತಿಂಗಳಷ್ಟೇ ತುಂಬಿತ್ತು. ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮಗು ರಕ್ತಸಿಕ್ತವಾಗಿದ್ದು, ಉಸಿರಾಡುವುದನ್ನೇ ನಿಲ್ಲಿಸಿದೆ. ಪಾಪಿ ತಂದೆಗೆ ತನ್ನ ತಪ್ಪಿನ ಅರಿವು ಕೂಡ ಆಗಿಲ್ಲ. ಮಗುವನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನು ಮಾಡದೇ ಗೂಗಲ್ ನಲ್ಲಿ ಬೇರೆಯದ್ದೇ ವಿಚಾರವನ್ನು ಸರ್ಚ್ ಮಾಡಿದ್ದಾನೆ.

ಉಸಿರಾಟ ನಿಂತಾಗ ಏನು ಮಾಡಬೇಕು, ಮಗು ಸತ್ತಿದೆ ಎಂಬುದನ್ನು ಹೇಗೆ ತಿಳಿಯಬೇಕು ಎಂಬುದನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾನೆ. ಆನಂತರ ತನ್ನ ಸಾಮಾಜಿಕ ಜಾಲತಾಣದಲ್ಲೇ ತನ್ನಿಬ್ಬರು ಸ್ನೇಹಿತೆಯರ ಜೊತೆ ಮಗುವಿನ ಸ್ಥಿತಿ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾನೆ. ಇದೆಲ್ಲ ವಿಚಾರಗಳು ಆತನ ಫೋನ್ ನಿಂದ ಬಯಲಾಗಿದೆ.

ಕಾಲ ಮಿಂಚಿಹೋದ ಮೇಲೆ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾನೆ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದ್ದು, ಅತ್ಯಾಚಾರವಾಗಿರುವ ಬಗ್ಗೆ ತಿಳಿದುಬಂದಿದೆ. ಈ ಹಿನ್ನೆಲೆ ಆಸ್ಟೀನ್ ಸ್ಟೀವನ್ ಇದ್ದ ಅಪಾರ್ಟ್ ಮೆಂಟ್ ಗೆ ಪೊಲೀಸರು ಭೇಟಿ ನೀಡಿದ್ದಾರೆ. ಅಲ್ಲಿ ರಕ್ತಸಿಕ್ತವಾದ ಡೈಪರ್ ಪತ್ತೆಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಆ ಪುಟ್ಟ ಮಗುವಿನ ಬಗ್ಗೆ ಸಾವಿರಾರು ಕನಸು ಕಂಡಿದ್ದ ಆ ತಾಯಿ ಹೃದಯ ಈ ಘಟನೆಯಿಂದ ಎಷ್ಟು ನೊಂದಿರಬೇಡ. ಸಾಕಿ ಸಲಹಿ, ಒಂದೊಳ್ಳೆ ಭವಿಷ್ಯ ರೂಪಿಸಿಕೊಡಬೇಕಾದ ತಂದೆಯೇ ಮಗಳನ್ನ ಇಂತ ಹೀನಾಯ ಕೃತ್ಯಕ್ಕೆ ಕಾರಣನಾದವನಿಗೆ ತಕ್ಕ ಶಿಕ್ಷೆ ಕೊಡದೆ ದೇವರು ಬಿಡುತ್ತಾನಾ..?