ಮಡಿಕೇರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾಡು, ಪ್ರಾಣಿ, ಫೋಟೋಗ್ರಫಿ ಅಂದ್ರೆ ಬಲು ಇಷ್ಟ. ಅದರಂತೆ ಸ್ನೇಹಿತರ ಜೊತೆ ಆಗಾಗ ಟ್ರಿಪ್ ಹೊಡಿತಾನೇ ಇರ್ತಾರೆ. ಸದ್ಯ 3 ದಿನಗಳ ಪ್ರವಾಸದಲ್ಲಿರುವ ದರ್ಶನ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಂಗಳವಾರ ಬೆಂಗಳೂರಿನಿಂದ ದರ್ಶನ್, ಪ್ರಜ್ವಲ್ ದೇವರಾಜ್, ಪ್ರಣಮ್, ಚಿಕ್ಕಣ್ಣ, ಧರ್ಮಕೀರ್ತಿ ರಾಜ್, ಬಾಲ್ಯದ ಗೆಳೆಯರೆಲ್ಲಾ ಸೇರಿ ಟ್ರಿಪ್ ಹೊರಟಿದ್ದಾರೆ.
ಮಡಿಕೇರಿಗೆ ತಲುಪಿರುವ ಎಲ್ಲರು ಅಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋಗಳು ದರ್ಶನ್ ಫ್ಯಾನ್ಸ್ ಗಳ ಪೇಜ್ ಗಳಲ್ಲಿ ರಾರಾಜಿಸುತ್ತಿವೆ.
ಮಡಿಕೇರಿಯಲ್ಲಿರುವ ದರ್ಶನ್ ಮತ್ತು ಸ್ನೇಹಿತರು ಕ್ರಿಕೆಟ್ ಆಡಿ ಮಸ್ತಿ ಮಾಡಿದ್ದಾರೆ. ಈ ವಿಡಿಯೋ ದರ್ಶನ್ ಫ್ಯಾನ್ ಪೇಜ್ ನಲ್ಲಿದ್ದು, ಅದರಲ್ಲಿ ಚಿಕ್ಕಣ್ಣ ಬ್ಯಾಟಿಂಗ್ ಮಾಡುತ್ತಿದ್ದರೆ, ಧರ್ಮ ಕೀರ್ತಿ ರಾಜ್ ಬೌಲಿಂಗ್ ಮಾಡುತ್ತಿದ್ದಾರೆ. ದರ್ಶನ್ ಫೀಲ್ಡಿಗಿಳಿದಿದ್ದಾರೆ.
ಮಡಿಕೇರಿಯಲ್ಲಿ ಉಳಿದುಕೊಂಡಿರುವ ರೆಸಾರ್ಟ್ ಮುಂದೆ ಕ್ರಿಕೆಟ್ ಆಡಿ ಮಸ್ತ್ ಮಜಾ ಮಾಡಿದ್ದಾರೆ.
ದರ್ಶನ್ ಅವರ ರಾಬರ್ಟ್ ಸಿನಿಮಾ ಶೂಟಿಂಗ್ ಮುಗಿದಿದ್ದು, ರಿಲೀಸ್ ಗೆ ರೆಡಿಯಾಗಿದೆ. ಈ ಮಧ್ಯೆ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು, ಸ್ನೇಹಿತರ ಜೊತೆ ಒಂದು ಜಾಲಿ ಟ್ರಿಪ್ ಹೊಡೆಯುತ್ತಿದ್ದಾರೆ.
ಗಜಪಡೆ ಕ್ರಿಕೆಟ್ ಹಾಡುತ ಜಾಲಿ ಮೂಡಿನಲ್ಲಿ@dasadarshan @PrajwalDevaraj @umap30071 @PranamDevaraj @pannagabharana pic.twitter.com/gQUZHQU4Sh
— D Company(R)Official (@Dcompany171) November 18, 2020