Thursday, May 13, 2021
No menu items!
Home Karnataka ನಿರ್ಭಾಯಾ ಸೇಫ್ಟಿ ಟೆಂಡರ್‌ ಕೇಸ್‌ ವಿಚಾರಣೆ ಎದುರಿಸುತ್ತಿದ್ದ ಡಿ ರೂಪಾ ಸೇರಿದಂತೆ ಹಲವರ ವರ್ಗಾವಣೆ

ನಿರ್ಭಾಯಾ ಸೇಫ್ಟಿ ಟೆಂಡರ್‌ ಕೇಸ್‌ ವಿಚಾರಣೆ ಎದುರಿಸುತ್ತಿದ್ದ ಡಿ ರೂಪಾ ಸೇರಿದಂತೆ ಹಲವರ ವರ್ಗಾವಣೆ

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ, ಹೇಮಂತ್‌ ನಿಂಬಾಳ್ಕರ್‌ ಸೇರಿದಂತೆ 9 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇಂದು ಸಂಜೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

ವರ್ಗಾವಣೆಗೊಂಡವರು:

* ಕೆ ರಾಮಚಂದ್ರರಾವ್ (1993 ಬ್ಯಾಚ್), ಎಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವಿಭಾಗದಿಂದ ಎಡಿಜಿಪಿ ಮಾನವ ಹಕ್ಕು ವಿಭಾಗಕ್ಕೆ ವರ್ಗಾವಣೆ

 

* ರೂಪಾ ಡಿ, (2000 ಬ್ಯಾಚ್), ಐಜಿಪಿ ಹಾಗೂ ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ ಇಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

 

* ಮಾಲಿನಿ ಕೃಷ್ಣಮೂರ್ತಿ (2000 ಬ್ಯಾಚ್) ಎಡಿಜಿಪಿ, ಮಾನವ ಹಕ್ಕುಗಳ ವಿಭಾಗದಿಂದ ಎಡಿಜಿಪಿ ಹಾಗೂ ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ.

* ಹೇಮಂತ್ ನಿಂಬಾಳ್ಕರ್ (1998 ಬ್ಯಾಚ್) ಐ ಜಿ ಪಿ ಹಾಗೂ ಎಸಿಪಿ (ಆಡಳಿತ) ಬೆಂಗಳೂರು ನಗರ ವಿಭಾಗದಿಂದ ಐಜಿಪಿ ಆಂತರಿಕ ಭದ್ರತಾ ವಿಭಾಗ(ಐಎಸ್ ಡಿ) ಬೆಂಗಳೂರು.ಎಂ ಚಂದ್ರಶೇಖರ್ (1998 ಬ್ಯಾಚ್) ಎಸಿಪಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬೆಂಗಳೂರು ವಿಭಾಗದಿಂದ ಐಜಿಪಿ ಸೆಂಟ್ರಲ್ ರೇಂಜ್, ಬೆಂಗಳೂರು

 

* ವಿಪುಲ್ ಕುಮಾರ್ (1999 ಬ್ಯಾಚ್) ಐಜಿಪಿ, ದಕ್ಷಿಣ ರೇಂಜ್ ಮೈಸೂರು ವಿಭಾಗದಿಂದ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಐಜಿಪಿ ಹಾಗೂ ನಿರ್ದೇಶಕ.

 

* ವಿಕಾಶ್ ಕುಮಾರ್ ವಿಕಾಶ್ (2004 ಬ್ಯಾಚ್) ಡಿಐಜಿ ಅಂಡ್ ಮಂಗಳೂರು ನಗರ ಆಯುಕ್ತ ಹುದ್ದೆಯಿಂದ ಕರ್ನಾಟಕ ಮೀಸಲು ಪಡೆ(ಕೆಎಸ್ ಆರ್ ಪಿ) ಡಿಐಜಿಯಾಗಿ ವರ್ಗ.

 

* ವಾರ್ತಿಕಾ ಕಟಿಯಾರ್ (2010 ಬ್ಯಾಚ್) ರಾಜ್ಯ ಕ್ರಿಮಿನಲ್ ರೆಕಾರ್ಡ್ ಬ್ಯುರೋ ಎಸ್ಪಿ, ಬೆಂಗಳೂರು

 

* ರಂಜಿತ್ ಕುಮಾರ್ ಬಂಡಾರು( 2017 ಬ್ಯಾಚ್) ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಹುದ್ದೆಯಿಂದ ಭಟ್ಕಳ ಉಪ ವಿಭಾಗ, ಕಾರವಾರ, ಉತ್ತರ ಕನ್ನಡ ಜಿಲ್ಲೆಯ ಎಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

 

ನಿರ್ಭಯಾ ಸೇಫ್ಟಿ ಟೆಂಡರ್‌ ವಿಚಾರದಲ್ಲಿ ಡಿ ರೂಪಾ ವಿರುದ್ಧ ಆರೋಪ ಕೇಳಿ ಬಂದಿದ್ದ ಬೆನ್ನಲ್ಲೇ ಡಿ ರೂಪಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೇ ವಿಚಾರವಾಗಿ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಮತ್ತು ಡಿ ರೂಪಾ ಮಧ್ಯೆ ಜಟಾಪಟಿ ಕೂಡ ಏರ್ಪಟ್ಟಿತ್ತು. ಇದೀಗ ನಿಂಬಾಳ್ಕರ್‌, ಡಿ ರೂಪಾ ಸೇರಿದಂತೆ 9 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆಗಸ್ಟ್ ತಿಂಗಳ ಆರಂಭದಲ್ಲಿಯಷ್ಟೇ ಡಿ. ರೂಪಾ, ರೋಹಿಣಿ ಕಟೋಚ್, ಉಮೇಶ್ ಕುಮಾರ್, ಶಶಿಕುಮಾರ್, ಅನುಚೇತ್ ಸೇರಿದಂತೆ 17 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

 

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments