ಬೆಂಗಳೂರು: ಕ್ರಿಸ್ ಮಸ್ ಹಬ್ಬ ಹತ್ತಿರ ಬರುತ್ತಿದ್ದು, ಹಾಗೇ ಹೊಸ ವರ್ಷವೂ ಸನ್ನಿಹಿತವಾಗುತ್ತಿರುವ ಹಿನ್ನೆಲೆ ಕೇಕ್ ಶೋ ಮೇಳವೂ ಶುರುವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕೇಕ್ ಉತ್ಸವ ಆಯೋಜಿಸಿದ್ದು, 46 ನೇ ವರ್ಷದ ಈ ಕೇಕ್ ಶೋನಲ್ಲಿ ಮಕ್ಕಳನ್ನು ರಂಜಿಸಲು, ಆಕರ್ಷಿಸಲು ವಿಶೇಷ ವಸ್ತು ವಿನ್ಯಾಸಗಳನ್ನು ರೂಪುಗೊಳಿಸಲಾಗಿದೆ.
ಮಕ್ಕಳಿಗಾಗಿಯೇ ಈ ಬಾರಿ ನಗರದ ಸೆಂಟ್ ಜೋಸೆಫ್ ಆಟದ ಮೈದಾನದಲ್ಲಿ ಇಂದಿನಿಂದ ಆಕರ್ಷಕ ಕೇಕ್ ಶೋ ಆಯೋಜಿಸಲಾಗಿದೆ. ಈ ಬಾರಿಯ ಕೇಕ್ ಶೋನಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂದೇಶ ಸಾರುವ ಅಂಶಗಳಿಗೂ ಸಹ ಈ ಬಾರಿ ಒತ್ತು ನೀಡಿದ್ದಾರೆ.
ಕಣ್ಮನ ಸೆಳೆಯುವ ಐಫೆಲ್ ಟವರ್, ಕೊರೋನಾ ವೈರಸ್ ನ ಪ್ರತಿಬಿಂಬ, ವಾಲುತ್ತಿರುವ ಪೀಸಾ ಗೋಪುರ, ಮಹಾ ನಾಯಕ – ಮಹಾ ಗಣಗೇಶ, ನಟರಾಜ ದೇವರು, ಗೋಲ್ಡನ್ ಡ್ರಾಗನ್, ಗಾಂಧಾರ ಲೋಕ, ಜಿಯೋ ಶಾಂಡಿಲಿಯರ್, ನೃತ್ಯ ಮಾಡುತ್ತಿರುವ ಜೋಕರ್, ಅರಣ್ಯದ ಶಕ್ತಿ ಸೆಂಟಾರರ್, ಕಪ್ಪು ದಿರುಸಿನಲ್ಲಿ ನ ವ ವಧು, ಶ್ವೇತ ವರ್ಣದ ಮದುವೆ ಕೇಕ್, ಜೆ.ಕೆ.ರಾಲಿಂಗ್ ಪುಸ್ತಕ, ಚಿಟ್ಟೆ ಕೇಕ್, ಲಂಡನ್ ನ ಕೆರೋಸೆಲ್, ಮಿನುಗುವ ಕಾರು ಈ ಬಾರಿಯ ಕೇಕ್ ಶೋನ ವೈಶಿಷ್ಟ್ಯಗಳು.
ಜನವರಿ 3 ರ ವರೆಗೆ ನಡೆಯಲಿರುವ ಕೇಕ್ ಶೋ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಪ್ರವೇಶ ಶುಲ್ಕ 90 ರೂಪಾಯಿ ನಿಗದಿ ಮಾಡಲಾಗಿದೆ. ಕೇಕ್ ಶೋ ನಲ್ಲಿ ಕೋವಿಡ್ ನಿಯಮಾವಳಿಗಳನ್ನು ಫಾಲೋ ಮಾಡಲಾಗುತ್ತಿದೆ.