ಬೆಳಗಾವಿ: ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಅವರ ಹೆಂಡತಿ ನನಗೆ ಕಲ್ಯಾಣ್ ಅವರ ಜೊತೆ ಇರುವುದಕ್ಕೆ ಆಗಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಂದು ಕಲ್ಯಾಣ್ ಅವರ ಪತ್ನಿ ಅಶ್ವಿನಿ ಅವರಿಗೆ ಮನೋರೋಗ ತಜ್ಞ ಸಂದೀಪ್ ಪಾಟೀಲ್ ಆನ್ ಲೈನ್ ಕೌನ್ಸೆಲಿಂಗ್ ನಡೆಸಿದ್ದಾರೆ.
ಕಲ್ಯಾಣ್ ಮತ್ತು ಅಶ್ವಿನಿ ಅವರ ಕುಟುಂಬಸ್ಥರು ಮಾಳಮಾರುತಿ ಪೆÇಲೀಸ್ ಠಾಣೆಗೆ ಆಗಮಿಸಿದ್ದಾರೆ. ಕೆ.ಕಲ್ಯಾಣ್ ಸೋದರ ಮತ್ತು ಅತ್ತಿಗೆ, ಕಲ್ಯಾಣ್ ಪತ್ನಿ ಅಶ್ವಿನಿಯ ದೊಡ್ಡಮ್ಮ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದಾರೆ. ಮಾಳಮಾರುತಿ ಸಿಪಿಐ ಜೊತೆ ಕುಟುಂಬಸ್ಥರು ಚರ್ಚೆ ನಡೆಸಿದ್ದು, ಅಶ್ವಿನಿ ಜೊತೆಗೂ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ. ಇಬ್ಬರ ನಡುವೆ ಕಲಹ ಉಂಟಾಗಿದ್ದು, ಸಂಸಾರ ಸರಿ ಮಾಡುವ ಕೆಲಸದಲ್ಲಿ ಕುಟುಂಬಸ್ಥರು ತೊಡಗಿದ್ದಾರೆ.
ಕೆ.ಕಲ್ಯಾಣ್ ಅವರ ಹೆಂಡತಿಯ ಆರೋಪಕ್ಕೆ ಸ್ಪಷ್ಟನೆ ಕೂಡ ಕೊಟ್ಟಿದ್ದರು. ನನ್ನ ಮತ್ತು ನನ್ನ ಹೆಂಡತಿಯ ನಡುವೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ. ಮನೆಯಲ್ಲಿ ರಿಪೇರಿ ಕಾರ್ಯ ಇದೆ ಅಂತಾ ಅತ್ತೆ ಮಾವನ ಜತೆಗೆ ಬೆಳಗಾವಿಗೆ ಬಂದಳು, ಇದಾದ ಬಳಿಕ ಜನವರಿ 10 ರಿಂದ ಮೊಬೈಲ್ ಕನೆಕ್ಟ್ ಆಗುತ್ತಿರಲಿಲ್ಲ. ಕೆಲವು ದಿನಗಳ ನಂತರ ಬೆಳಗಾವಿಗೆ ನಾನು ಬಂದಿದ್ದೆ. ಆಗ ಪತ್ನಿ ನೋಡಲು ಅತ್ತೆ ಬಿಡಲಿಲ್ಲ, ಅಲ್ಲಿ ಗಂಗಾ ಕುಲಕರ್ಣಿ ಕೂಡ ಇದ್ದರು. ಮನೆಯಲ್ಲಿ ವಿಚಿತ್ರವಾದ ಪೂಜೆ ಮಾಡುತ್ತಿರುವುದು ಗೊತ್ತಾಯಿತು. ನಂತರ ನನ್ನ ನಂಬರ್ ನ ಸಂಬಂಧಿಕರ ಕಡೆ ಹೇಳಿ ಬ್ಲಾಕ್ ಮಾಡಿಸಿದ್ದರು ಎಂದಿದ್ದಾರೆ.
ಇಂದು ಇಬ್ಬರ ಸಂಸಾರವನ್ನು ಮತ್ತೆ ಒಂದು ಮಾಡಲು ಕುಟುಂಬಸ್ಥರೇ ಚರ್ಚೆ ನಡೆಸುತ್ತಿದ್ದಾರೆ. ಜೊತೆಗೆ ಕೌನ್ಸೆಲಿಂಗ್ ಕೂಡ ನಡೆಯುತ್ತಿದ್ದು, ಸಮಸ್ಯೆ ಬಗೆಹರಿದು ಮತ್ತೆ ಮೊದಲಿನಂತೆ ಆಗ್ತಾರಾ ಅನ್ನೋದನ್ನು ನೋಡಬೇಕಿದೆ.