ಬೆಂಗಳೂರು : ಮೇ_ಜೂನ್ ತಿಂಗಳಿನಿಂದ ಸತತ ಏರಿಕೆ ಕಂಡಿದ್ದ ಕೊರೋನಾ ವೈರಸ್ ಸಂಖ್ಯೆ ಕೆಲ ದಿನಗಳಿಂದ ಇಳಿಕೆ ಕಂಡಿದೆ. ದಿನಕ್ಕೆ 10 ಸಾವಿರದ ಗಡಿದಾಟಿದ್ದ ಸೋಂಕಿತರ ಸಂಖ್ಯೆ ಇಂದು ಕಳೆದ 24 ಗಂಟೆಯಲ್ಲಿ 3,130 ಸೋಂಕಿತರು ಪತ್ತೆಯಾಗಿದ್ದಾರೆ.
ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8.5947 ಕ್ಕೇರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ 1603 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,27,376 ಕ್ಕೆ ಏರಿಕೆಯಾಗಿದೆ.
ಉಳಿದಂತೆ ದಕ್ಷಿಣ ಕನ್ನಡ 153, ದಾವಣಗೆರೆ 124, ಮೈಸೂರಿನಲ್ಲಿ 139 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇಂದು ಒಟ್ಟು 42 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರು ಒಂದರಲ್ಲೇ 20 ಜನ ಮೃತಪಟ್ಟಿದ್ದಾರೆ. ಒಟ್ಟು ಕರ್ನಾಟಕದಲ್ಲಿ 10,947 ಮಂದಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.

8715 ಜನ ಇಂದು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 942 ರೋಗಿಗಳು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.