ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಅದರಲ್ಲಿ ಕಳೆದ 24 ಗಂಟೆಯಲ್ಲಿ 1, 336 ಹೊಸ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಅದರಲ್ಲಿ ಬೆಂಗಳೂರು ನಗರದಲ್ಲಿ 729 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ನಗರದಲ್ಲಿನ ಒಟ್ಟು 3,58,606ಕ್ಕೆ ಏರಿಕೆಯಾಗಿದೆ ಸೋಂಕಿತರ ಸಂಖ್ಯೆ. 17,707 ಸಕ್ರಿಯ ಪ್ರಕರಣಗಳಿವೆ.
ಉಳಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ 40, ದಕ್ಷಿಣ ಕನ್ನಡ 30, ದಾವಣಗೆರೆ 24, ಹಾಸನ 30, ಮಂಡ್ಯ 38, ಮೈಸೂರು 52, ತುಮಕೂರು 89, ಉತ್ತರ ಕನ್ನಡ 32 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
13, 392 ರ್ಯಾಪಿಡ್ಆಂಟಿಜೆನ್ ಟೆಸ್ಟ್, 61,992 ಆರ್ಟಿಪಿಸಿಆರ್ ಟೆಸ್ಟ್ ಸೇರಿದಂತೆ 75,384 ಜನರಿಗೆ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 1,336 ಜನರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ.
2100 ಮಂದಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 8,27,241 ಜನರು ಗುಣಮುಖರಾಗಿದ್ದಾರೆ. 16 ಮಂಧಿ ಕೊರೊನಾದಿಂದ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 11,557 ಕ್ಕೇರಿಕೆಯಾಗಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ದರ 95.72% ರಷ್ಟಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ನವೆಂಬರ್ 17ರಂದು ಯಾವುದೇ ಕೋವಿಡ್ ರೋಗಿ ಮರಣ ಹೊಂದಿಲ್ಲ. ಮರಣ ಪ್ರಮಾಣ 1.39% ರಷ್ಟಿದೆ.