ಬೆಂಗಳೂರು: ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು, ರಾಜ್ಯದ ಜನತೆ ಸ್ವಲ್ಪ ನಿಟ್ಟುಸಿರು ಬೊಡುವಂತೆ ಮಾಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊರೊನಾ ವೈರಸ್ ಜನರನ್ನ ಭಯದ ವಾತಾವರಣಕ್ಕೆ ದೂಡಿತ್ತು. ಆದ್ರೆ ಕಳೆದ ಒದು ವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಬದಲಾಗಿದ್ದು, ಸ್ವಲ್ಪ ಸಮಾಧಾನಕರವಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 2576 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಅದರಲ್ಲಿ ಬೆಂಗಳೂರಿನಲ್ಲಿ 1439 ಕೇಸ್, ಮೈಸೂರು 100, ತುಮಕೂರು 123, ಮಂಡ್ಯ 92, ಹಾಸನ 87 ಕೇಸ್ ಗಳು ದಾಖಲಾಗಿವೆ.
ಕೊರೊನಾದಿಂದ ಇಂದು ರಾಜ್ಯದಲ್ಲಿ 29 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 11221 ಕ್ಕೆ ಏರಿಕೆಯಾದಂತಾಗಿದೆ. ಅನ್ಯಕಾರಣದಿಂದ 19 ಜನ ಸಾವನ್ನಪ್ಪಿದ್ದಾರೆ.

ಉಳಿದಂತೆ ಇಂದು ಕೊರೊನಾದಿಂದ ಗುಣಮುಖರಾಗಿ 8334 ಜನ ಮನೆಗೆ ತೆರಳಿದ್ದಾರೆ. 931 ಜನ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
78496 ಜನರಿಗೆ ಇಂದು ಟೆಸ್ಟ್ ಮಾಡಲಾಗಿದೆ. ಅದರಲ್ಲಿ 2576 ಜನರಿಗೆ ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ 44805 ಪ್ರಕರಣಗಳು ಸಕ್ರಿಯ ಪ್ರಕರಣಗಳಿವೆ.