ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾಕಷ್ಟು ಇಳಿಮುಖವಾಗುತ್ತಿದೆ. ದಿನಕ್ಕೆ 10 ಸಾವಿರ ಕೇಸ್ ಬರುತ್ತಿದ್ದ ದಿನಗಳನ್ನು ಕಂಡು ಜನ ಗಾಬರಿಯಾಗಿದ್ದರು. ಇದೀಗ ದಿನೇ ದಿನೇ ಇಳಿಮುಖವಾಗುತ್ತಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ 24 ಗಂಟೆಯಲ್ಲಿ 2116 ಮಂದಿಗೆ ಕೊರೊನಾ ಸೋಂಕು ತಗುಲಿರುವು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಂಗಳೂರಿನಲ್ಲಿ 1069 ಕೇಸ್ ಗಳು ದಾಖಲಾಗಿವೆ. ಉಳಿದಂತೆ ಬಾಗಲಕೋಟೆ 14, ಬಳ್ಳಾರಿ 41, ಬೆಳಗಾವಿ 54, ಬೆಂಗಳೂರು ಗ್ರಾಮಾಂತರ 43, ಬೀದರ್ 3, ಚಾಮರಾಜನಗರ 12, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 37, ಚಿತ್ರದುರ್ಗ 41, ದಕ್ಷಿಣ ಕನ್ನಡ 53, ದಾವಣಗೆರೆ 29, ಧಾರವಾಡ 18, ಗದಗ 5, ಹಾಸನ 100, ಹಾವೇರಿ 6, ಕಲಬುರಗಿ 51, ಕೊಡಗು 8, ಕೋಲಾರ 18, ಕೊಪ್ಪಳ 28, ಮಂಡ್ಯ 74, ಮೈಸೂರು 115, ರಾಯಚೂರು 9, ರಾಮನಗರ 12, ಶಿವಮೊಗ್ಗ 51, ತುಮಕೂರು 80, ಉಡುಪಿ 31, ಉತ್ತರ ಕನ್ನಡ 32, ವಿಜಯಪುರ 51, ಯಾದಗಿರಿ 7, ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
ಇಂದು ಕೊರೊನಾದಿಂದಾಗಿ 21 ಜನರು ಬಲಿಯಾಗಿದ್ದು, ಈ ಮೂಲಕ ಒಟ್ಟು ಸಾವಿನ ಸಂಖ್ಯೆ 11474ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲೇ 3368 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ ರಾಜ್ಯದಲ್ಲಿ 29470 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.