ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನಿನ್ನೆ ಸಿ ಟಿ ರವಿ ಅವರು ಆರ್ ಎಸ್ ಎಸ್ ಶಾಖೆಗೆ ಆಹ್ವಾನಿಸಿದ್ದರು. ಇಂದು ಕಾಂಗ್ರೆಸ್ ಸಿ ಟಿ ರವಿ ಅವರಿಗೆ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಸಿ ಟಿ ರವಿ ಅವರೇ ನಿಮ್ಮನ್ನು ಕಾಂಗ್ರೆಸ್ ಕಚೇರಿಗೆ ಆಹ್ವಾನಿಸುತ್ತೇವೆ. ದೇಶದ ಇತಿಹಾಸ, ದೇಶಕ್ಕೆ ಕಾಂಗ್ರೆಸ್ ಕೊಡುಗೆ, ಜಾತ್ಯಾತೀತ ಸಿದ್ಧಾಂತ, ಬಹುತ್ವ ಭಾರತದ ಅಂತಶಕ್ತಿ, ಸೌಹಾರ್ದತೆಯ ಅಗತ್ಯ, ಸಂವಿಧಾನದ ಆಶಯಗಳ ಬಗ್ಗೆ ನೀವು ತಿಳಿದುಕೊಳ್ಳುವ ಅಗತ್ಯವಿದೆ. ಆ ಬಗ್ಗೆ ನಮ್ಮಲ್ಲಿ ಅರಿವು ನೀಡುತ್ತೇವೆ. ಆರ್ ಎಸ್ ಎಸ್ ಚಿಂತನೆಗಳನ್ನು ಬಿಟ್ಟು ಕೆಪಿಸಿಸಿ ಕಚೇರಿಗೆ ಬನ್ನಿ ಎಂದು ಆಹ್ವಾನ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಈ ಟ್ವೀಟ್ ಗೆ ಸಿ ಟಿ ರವಿ ಅವರು ಮರು ಟ್ವೀಟ್ ಮಾಡಿದ್ದಾರೆ. ಅಯ್ಯೋ ಪಕ್ಷವೇ, ದೇಶದಾದ್ಯಂತ ಮುಳುಗುತ್ತಿರುವ ನಿಮ್ಮ ಪಕ್ಷದ ಕಚೇರಿಯ ಬಾಗಿಲು ತುಳಿಯುವ ದೌರ್ಭಾಗ್ಯ ನನಗೆ ಬಂದಿಲ್ಲ ಮತ್ತು ಬರುವುದು ಇಲ್ಲ. ನಿಮ್ಮ ಪಕ್ಷದ ಇತಿಹಾಸವೇ 1969 ರಿಂದ ಪ್ರಾರಂಭವಾಗಿರುವಾಗ ದೇಶದ ಬಗ್ಗೆ ನೀವೇನು ಹೇಳಿ ಕೊಡುತ್ತೀರಾ ನನಗೆ..? ಒಂದು ಕೋಮಿನ ಒಲೈಕೆ ಮಾಡುವುದೇ ಜಾತ್ಯಾತೀತ ಸಿದ್ಧಾಂತವೆ ಎಂದು ಸಿ ಟಿ ರವಿ ಅವರು ಪ್ರಶ್ನಿಸಿದ್ದಾರೆ.
ಒಟ್ಟಾರೆ ಎರಡು ಪಕ್ಷಗಳು ಟ್ವೀಟ್ ಮಾಡುವ ಮೂಲಕ ಒಬ್ಬರಿಗೊಬ್ಬರು ಟಾಂಗ್ ಕೊಟ್ಟಿದ್ದಾರೆ.