ಬೆಂಗಳೂರು: ಕೋವಿಡ್ ರೂಪಾಂತರ ತಳಿಯ ಸೋಂಕು ಹೆಚ್ಚಾಗುವ ಭಿತಿಯಿಂದ ಕರ್ನಾಟಕದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿಗೆ ತರಲಾಗಿದೆ. ಈ ಬಗ್ಗೆ ಮಾತನಾಡಿರುವ ಕಮಿಷನರ್ ಕಮಲ್ ಪಂತ್, ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಇಂದು ರಾತ್ರಿ 11 ರಿಂದ ಬೆಳಗ್ಗೆ 5 ವರೆಗೂ ಕರ್ಫ್ಯೂ ಇರುತ್ತೆ. ಗೂಡ್ಸ್ ವಾಹನ, ಕೈಗಾರಿಕೆ ಗಳ ಕೆಲಸಕ್ಕೆ ಅನುಮತಿಯಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ರೈಲು, ಬಸ್ , ವಿಮಾನ ನಿಲ್ದಾಣದಲ್ಲೂ ನಿಬಂಧನೆಗಳಿಲ್ಲ. ಕೈಗಾರಿಕೆಯವರು ಐಡಿಕಾರ್ಡ್ ಹೊಂದಿರಬೇಕು. ಕ್ತಿಸ್ ಮಸ್ ಇರುವ ಕಾರಣ ಮಿಡ್ ನೈಟ್ ಮಾಸ್ ಗೆ ಅನುಮತಿ ನೀಡಲಾಗಿದೆ ಎಂದಿದ್ದಾರೆ.
ಇನ್ನೂ ಈಗಾಗಲೇ ಬ್ಯಾರಿಗೇಡ್ ಹಾಕಲಾಗುತ್ತಿದೆ. ಎಲ್ಲಾ ಕಡೆ ಚೆಕ್ ಮಾಡಲಾಗುತ್ತೆ. ಫ್ಲೈ ಓವರ್ ಕೂಡ ಕ್ಲೋಸ್ ಮಾಡಲಾಗುತ್ತದೆ. ಸ್ಟೇಷನ್ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಲಾಗುತ್ತದೆ. ಅನಾವಶ್ಯಕ ಓಡಾಟಕ್ಕೆ ಅವಕಾಶವಿಲ್ಲ ನಿಡಲಾಗುವುದಿಲ್ಲ. 144 ಸೆಕ್ಷನ್ ಜಾರಿಯಲ್ಲಿರೋದ್ರಿಂದ ಹೊಸ ವರ್ಷಕ್ಕೆ ಅವಕಾಶವಿರುವುದಿಲ್ಲ. ಎಲ್ಲರೂ 11 ಗಂಟೆಯೊಳಗೆ ಮನೆ ಸೇರಬೇಕು. ತಮ್ಮ ವ್ಯಾಪ್ತಿಯ ಎಲ್ಲಾ ಹೋಟೇಲ್ ಗಳಿಗೂ ಡಿಸಿಪಿಗಳು ಮಾಹಿತಿ ನೀಡಲಿದ್ದಾರೆ. 2021ಕ್ಕೆ ಪ್ರತಿ ವರ್ಷದಂತೆ ಹೊಸ ವರ್ಷಾಚರಣೆಯಿಲ್ಲ. ಎಂಜಿ ರೋಡ್, ಬ್ರಿಗೇಡ್ ರೋಡ್ ನ ಪಬ್ ಹೋಟೇಲ್ ಗಳಿಗೂ ಇದು ಅನ್ವಯವಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.