ಬೆಂಗಳೂರು: ಇಂದು ಚಿರು ಮತ್ತು ಮೇಘನಾ ದಂಪತಿಯ ಪುತ್ರನಿಗೆ ತೊಟ್ಟಿಲು ಶಾಸ್ತ್ರದ ಸಂಭ್ರಮ. ಚಿರುನನ್ನು ಕಳೆದುಕೊಂಡ ನಂತರ ದುಃಖದಲ್ಲಿ ಮುಳುಗಿದ್ದ ಕುಟುಂಬದಲ್ಲಿ ಜೂನಿಯರ್ ಚಿರು ಆಗಮನದಿಂದ ಸಂಭ್ರಮ ಮನೆ ಮಾಡಿದೆ.
ಬೆಳಗ್ಗೆಯಿಂದಲೇ ಮೇಘನಾ ಮನೆಯಲ್ಲಿ ಸಂಭ್ರಮದ ವಾತಾವರಣವಿದ್ದು, ಎಲ್ಲಾ ತಯಾರಿಗಳು ಭರ್ಜರಿಯಾಗಿ ನಡೆದಿದೆ. ತೊಟ್ಟಿಲು ಶಾಸ್ತ್ರ ಮಾಡಿ ಮಾಧ್ಯಮಗಳೊಂದಿಗೆ ಮೇಘನಾ ಮಾತನಾಡಿದ ವೇಳೆ ಚಿರುರನ್ನು ನೆನದು ಭಾವುಕರಾಗಿದ್ದಾರೆ. ಆನಂತರ ಮಾತನಾಡಿದ್ದು, ಚಿರು ಕನಸಿನಂತೆ ಮಗನನ್ನು ಬೆಳೆಸುತ್ತೇನೆ. ಅದೇ ನನ್ನ ಗುರಿ. ಅವರ ಆಸೆಯಂತೆ ಮಗನನ್ನು ಬೆಳೆಸಿದ್ರೆ ಮಾತ್ರ ಚಿರು ಕನಸಿಗೆ ಬೆಲೆ ಕೊಟ್ಟಂತಾಗುತ್ತದೆ. ಕೆಲವು ದಿನಗಳಿಂದ ನಾನು ಬ್ಲಾಂಕ್ ಆಗಿದ್ದೆ. ನನ್ನ ಮುಂದಿನ ದಿನಗಳು ಅಂದ್ರೆ ಅದು ನನ್ನ ಮಗ ಮಾತ್ರ ಎಂದು ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಇನ್ನು ನಾನು ನನ್ನ ಮಗುಗೆ ಒಳ್ಳೆಯ ತಾಯಿಯಾಗುತ್ತೇನೆ. ಹೆಸರನ್ನು ಇನ್ನು ಫಯನಲ್ ಮಾಡಿಲ್ಲ ನಾಮಕರಣದ ದಿನ ಹೆಸರು ತಿಳಿಸುತ್ತೇವೆ. ಚಿರು ಅಭಿಮಾನಿಗಳಿಗೆ ಈ ಸಮಯದಲ್ಲಿ ಧನ್ಯವಾದ ತಿಳಿಸಿದ್ದಾರೆ. ಇನ್ನು ನಟನೆ ಬಗ್ಗೆ ಮಾತನಾಡಿರುವ ಮೇಘನಾ, ನಾನು ನಟನೆಯನ್ನು ಬಿಡುವುದಿಲ್ಲ. ಸಾಯುವವರೆಗೂ ನಟನೆಯನ್ನು ಮಾಡುತ್ತೇನೆ ಎಂದಿದ್ದಾರೆ.
ಚಿರು ಮತ್ತು ಮೇಘನಾ ಮಗನಿಗೆ ಇಂದು ತೊಟ್ಟಿಲು ಶಾಸ್ತ್ರ ಇರುವ ಕಾರಣ ಗದಗದಿಂದ ತೊಟ್ಟಿಲು ಬಂದಿದೆ. ಮಹಿಳಾ ಸಂಘದಿಂದ ತೊಟ್ಟಿಲು ಬಂದಿದ್ದು, ಹ್ಯಾಂಡ್ ಮೇಡ್ ತೊಟ್ಟಿಲು ಇದಾಗಿದೆ. ತೊಟ್ಟಿಲನ್ನು ಸ್ವೀಕರಿಸಿದ ಕುಟುಮಬ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿ ಶಾಸ್ತ್ರ ಮುಗಿಸಿದ್ದಾರೆ. ಈ ಬಗ್ಗೆ ಕೂಡ ಮೇಘನಾ ರಾಜ್ ಸಂತಸ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.