Saturday, May 15, 2021
No menu items!
Home Latest ಪಾಕಿಸ್ತಾನಕ್ಕೆ 50 ಶಸ್ತ್ರಸಜ್ಜಿತ ಡ್ರೋನ್ ಸರಬರಾಜು ಮಾಡಿದ ಚೀನಾ

ಪಾಕಿಸ್ತಾನಕ್ಕೆ 50 ಶಸ್ತ್ರಸಜ್ಜಿತ ಡ್ರೋನ್ ಸರಬರಾಜು ಮಾಡಿದ ಚೀನಾ

ಬೀಜಿಂಗ್: ಶತ್ರುಗಳ ಶತ್ರು ಮಿತ್ರರೆಂಬ ಮಾತಿನಂತೆ ಭಾರತದ ವಿರುದ್ಧ ಕತ್ತಿ ಮಸೆಯಲು ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ 50 ವಿಂಗ್ ಲೂಂಗ್ ಸಶಸ್ತ್ರ ಡ್ರೋನ್‍ಗಳನ್ನು ಸರಬರಾಜು ಮಾಡಿದೆ.

ಈ ಕುರಿತು ಚೀನಾದ ಸರಕಾರಿ ಮಾಧ್ಯಮ ಮಾಹಿತಿ ನೀಡಿದ್ದು ಚೀನಾ ಮತ್ತು ಟರ್ಕಿಯ ಸಶಸ್ತ್ರ ಡ್ರೋನ್‌ಗಳು ಲಿಬಿಯಾ, ಸಿರಿಯಾ ಮತ್ತು ಅಜರ್ಬೈಜಾನ್‌ಗಳಲ್ಲಿನ ಸಂಘರ್ಷಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಶತ್ರುಗಳ ವಿರುದ್ಧದ ಹೋರಾಟ ಮತ್ತು ಸಾಂಪ್ರದಾಯಿಕ ಶಸ್ತ್ರಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ದೊಡ್ಡ ಸಂಖ್ಯೆಯಲ್ಲಿನ ಸಶಸ್ತ್ರ ಡ್ರೋನ್‌ಗಳ ದಾಳಿಯನ್ನು ಭಾರತದ ಭೂ ಸೇನಾ ರಚನೆಗೆ ಎದುರಿಸಲು ಸಾಧ್ಯವಾಗಲಾರದು ಎಂದೂ ಚೀನಾದ ಮಾಧ್ಯಮ ಹೇಳಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರು ಭಾರತೀಯ ಸೇನಾ ಅಧಿಕಾರಿಗಳು ನಮ್ಮ ಗಡಿಯಲ್ಲಿನ ವಾಯು ಪ್ರದೇಶವನ್ನು ರಾಡಾರ್‌ಗಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸೈನಿಕರು ವೈರಿಗಳೊಡನೆ ತೀವ್ರವಾಗಿ ಸ್ಪರ್ಧಿಸಲು ತಯಾರಿದ್ದಾರೆ ಎಂದು ಭಾರತದ ಮಾಜಿ ವಾಯುಪಡೆಯ ಮುಖ್ಯಸ್ಥರು ಹೇಳಿದ್ದಾರೆ.

ಆದರೆ ಸದ್ಯ ಭಾರತದ ಬಳಿ ಸಶಸ್ತ್ರ ಡ್ರೋನ್ ಇಲ್ಲದೇ ಇರುವುದರಿಂದ ಹಾಗೂ ಪಾಕಿಸ್ತಾನ ಇಂತಹ ಡ್ರೋನ್‍ಗಳನ್ನು ಹೊಂದುವುದರಿಂದ ಭಾರತ ಕೂಡ ಇಂತಹ ಡ್ರೋನ್‍ಗಳನ್ನು ಹೊಂದುವುದು ಅಗತ್ಯವಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments