ಬೀಜಿಂಗ್: ಚಂದ್ರನ ಉಗಮದ ಕುರಿತಾದ ರಹಸ್ಯವನ್ನು ತಿಳಿಯಲು ಚೀನಾ ವಿಜ್ಞಾನಿಗಳು ಚಂದ್ರನಲ್ಲಿಗೆ ಕಳುಹಿಸಿದ್ದ ‘ಚಾಂಗಿ 5’ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಭೂಮಿಗೆ ಮರಳಿದ್ದು ಚಂದ್ರನ ಮೇಲ್ಭಾಗದ ಶಿಲೆ, ಮಣ್ಣಿನ ಸ್ಯಾಂಪಲ್ ಗಳನ್ನ ಹೊತ್ತು ತಂದಿದೆ.
ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿರುವ ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಾಧಿಕಾರಿ, ಚಂದ್ರನ ಶಿಲೆ ಮತ್ತು ಮಣ್ಣು ಸಂಗ್ರಹಿಸಿರುವ ಬಾಹ್ಯಾಕಾಶ ನೌಕೆ ”ಚಾಂಗಿ-5” ಮಂಗೋಲಿಯಾದಲ್ಲಿ ಗುರುವಾರ ಬೆಳಗ್ಗೆ 1PM EST ದಂದು ಸುರಕ್ಷಿತವಾಗಿ ತಲುಪಿದೆ ಎಂದಿದ್ದಾರೆ.
ನವೆಂಬರ್ 24ರಂದು ಚೀನಾ ತನ್ನ ‘ಚಾಂಗ್-5 ಪ್ರೋಬ್’ ನೌಕೆಯನ್ನು ಉಡಾವಣೆ ಮಾಡಿತ್ತು.ಚಂದ್ರನ ಓಷನ್ ಆಫ್ ಸ್ಟಾರ್ಮ್ಸ್ ಎಂದು ಕರೆಯಲಾಗುವ ಅಪಾರ ಲಾವಾ ಕೇಂದ್ರಿತ ಪ್ರದೇಶಕ್ಕೆ ಇದುವರೆಗೂ ಯಾರೂ ಕಾಲಿರಿಸದ ಕಡೆಯಿಂದ ಚೀನಾ ನೌಕೆ ಮಣ್ಣನ್ನು ಹೊತ್ತು ತಂದಿದೆ.
ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ವಾಹನವು ತನ್ನ ರೋಬೋಟಿಕ್ ಕೈಗಳಿಂದ ಚಂದ್ರನ ನೆಲವನ್ನು ಅಗೆದು, ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಏರಿಕೆ ವಾಹನಕ್ಕೆ ತುಂಬಿಸಿದೆ. ಅದು ಆರ್ಬಿಟಿಂಗ್ ಮಾಡ್ಯುಲ್ಗೆ ಸೇರಿಸಿದೆ. ಸುಮಾರು ಎರಡು ದಿನಗಳ ಕಾಲ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಗಗನನೌಕೆ ಬಳಿಕ ಚೀನಾದ ಮಂಗೋಲಿಯಾ ಪ್ರದೇಶಕ್ಕೆ ಮರಳಲಿದೆ ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎನ್ಎಸ್ಎ) ಹೇಳಿದೆ.