Friday, September 24, 2021
No menu items!
Home Latest ಚಿಲ್ ಡೊನಾಲ್ಡ್ ಚಿಲ್ : 11 ತಿಂಗಳ ಬಳಿಕ ಟ್ರಂಪ್ ವಿರುದ್ದ ದ್ವೇಷ ತೀರಿಸಕೊಂಡ ಬಾಲಕಿ..!

ಚಿಲ್ ಡೊನಾಲ್ಡ್ ಚಿಲ್ : 11 ತಿಂಗಳ ಬಳಿಕ ಟ್ರಂಪ್ ವಿರುದ್ದ ದ್ವೇಷ ತೀರಿಸಕೊಂಡ ಬಾಲಕಿ..!

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯಾ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಸೋಲಿನ ಭೀತಿ ಎದುರಾಗಿದ್ದು, ಇದೇ ವೇಳೆ ಬಾಲಕಿಯೊಬ್ಬಳು ಟ್ವೀಟ್ ಮಾಡುವ ಮೂಲಕ 11 ತಿಂಗಳ ಹಿಂದಿನ ದ್ವೇಷ ತೀರಿಸಿಕೊಂಡಿದ್ದಾರೆ.

2019ರಲ್ಲಿ ‘ಟೈಮ್ಸ್’ ಪತ್ರಿಕೆಯ ವರ್ಷದ ವ್ಯಕ್ತಿ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದ್ದ ಗ್ರೆಟಾ ಥನ್ಬರ್ಗ್ ಅವರನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದ್ದರು. ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಮಾತುಗಳನ್ನೇ ಬಳಸಿಕೊಂಡಿರುವ ಗ್ರೆಟಾ, ಮತದಾನದಲ್ಲಿ ಮೋಸ ನಡೆಸಿದೆ ಎಂಬ ಟ್ರಂಪ್ ಆರೋಪವನ್ನು ಲೇವಡಿ ಮಾಡಿದ್ದಾರೆ.

2019ರ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಗ್ರೇಟಾ ಥನ್ಬರ್ಗ್, “ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಕನಸುಗಳನ್ನು, ನನ್ನ ಬಾಲ್ಯವನ್ನು ಕಸಿದುಕೊಂಡು ಬಿಟ್ಟಿರಿ. ಇಡೀ ಪರಿಸರದ ವ್ಯವಸ್ಥೆ ಇಂದು ಕುಸಿಯುತ್ತಿದೆ. ಜನರು ಸಾಯುತ್ತಿದ್ದಾರೆ, ನಾವೆಲ್ಲರೂ ಸಾಮೂಹಿಕವಾಗಿ ಅಳಿವಿನ ಅಂಚಿನ ಆರಂಭದಲ್ಲಿದ್ದೇವೆ. ಆದರೆ, ನೀವಿನ್ನೂ ಹಣ, ಶಾಶ್ವತ ಆರ್ಥಿಕತೆ ಎಂಬ ಪೊಳ್ಳು ಖಾಲಿ ಮಾತುಗಳನ್ನೇ ಆಡುತ್ತಿದ್ದೀರಿ. ಕಳೆದ 30 ವರ್ಷದಿಂದ ವಿಜ್ಞಾನ ಈ ಪರಿಸರವನ್ನು ಹಾಳು ಮಾಡಿದ್ದು ಸಾಕು. ಇದು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಎಲ್ಲವೂ ಕೈಮೀರಿ ಹೋಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ರಾಜಕೀಯವನ್ನು ನಿಲ್ಲಿಸಿ ಎಲ್ಲರೂ ಒಟ್ಟಾಗಿ ಪರಿಸರವನ್ನು ಉಳಿಸಲು ಮುಂದಾಗಿ” ಎಂದು ಆಕೆ ಇಡೀ ವಿಶ್ವಕ್ಕೆ ಕೇಳುವಂತೆ ಮೊರೆ ಇಟ್ಟಿದ್ದಳು.

ಇದನ್ನ ಗಮನಿಸಿದ್ದ ಟೈಮ್ ಮ್ಯಾಗಜಿನ್ 2019ರಲ್ಲಿ ಟೈಮ್ ಮ್ಯಾಗಜಿನ್ನ ವರ್ಷದ ವ್ಯಕ್ತಿಯಾಗಿ ಗ್ರೇಟಾ ಥನ್ಬರ್ಗ್ ಅವರನ್ನು ಆಯ್ಕೆ ಮಾಡಿ ಗೌರವಿಸಿತ್ತು. ಈ ವೇಳೆ ವಿಶ್ವದ ದೊಡ್ಡ ದೊಡ್ಡ ನಾಯಕರೂ ಸಹ ಗ್ರೇಟಾ ಥನ್ಬರ್ಗ್ಗೆ ಶುಭಾಶಯಗಳನ್ನು ತಿಳಿಸಿದ್ದರು. ಆದರೆ ಟ್ರಂಪ್ ಮಾತ್ರ ಚಿಕ್ಕ ಹುಡುಗಿಯ ವಿರುದ್ಧ ‘ನಿನ್ನ ಅಹಂಕಾರ ಬಿಡು’ ಎಂದು ಟ್ವೀಟ್ ಮಾಡಿ ಅವಮಾನ ಮಾಡಿದ್ದರು.

ಹಳೆಯ ಟ್ವೀಟ್ ಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ತಿರುಗೇಟು ನೀಡಿರುವ ಗ್ರೇಟಾ, ಟ್ರಂಪ್ ಅವರ ಮತ ಎಣಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಎಂಬ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ. ‘ಹಾಸ್ಯಾಸ್ಪದ. ಸ್ನೇಹಿತನೊಂದಿಗೆ ಹಳೆಯ ಶೈಲಿಯ ಚಲನಚಿತ್ರಕ್ಕೆ ಹೋಗಿ ತನ್ನ ಕೋಪ ನಿರ್ವಹಣೆ ಸಮಸ್ಯೆಯ ಬಗ್ಗೆ ಡೊನಾಲ್ಡ್ ಕೆಲಸ ಮಾಡಬೇಕು, ಚಿಲ್ ಡೊನಾಲ್ಡ್ ಚಿಲ್.. ಎಂದು ಟ್ವೀಟ್ ಮಾಡಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments