Friday, September 24, 2021
No menu items!
Home Entertainment ( Kan ) 'ಚಿಕ್ಕಣ್ಣ' ಸ್ಯಾಂಡಲ್ ವುಡ್ ನ ಮುಂದಿನ " ಉಪಾಧ್ಯಕ್ಷ "…!!

‘ಚಿಕ್ಕಣ್ಣ’ ಸ್ಯಾಂಡಲ್ ವುಡ್ ನ ಮುಂದಿನ ” ಉಪಾಧ್ಯಕ್ಷ “…!!

ಬೆಂಗಳೂರು : ಪ್ರಸ್ತುತ ಚಂದನವನದ ಕಾಮಿಡಿ ಕಿಂಗ್ , ಹಾಸ್ಯ ನಟ ಚಿಕ್ಕಣ್ಣ ಉಪಾಧ್ಯಕ್ಷ ರಾಗುತ್ತಿದ್ದಾರೆ. ಎಲ್ಲಿ ಅಂದಿರಾ, ಅವರ ಮುಂದಿನ ಚಿತ್ರ ಹೆಸರೇ “‘ ಉಪಾಧ್ಯಕ್ಷ “. ಇಷ್ಟು ದಿನಗಳವರೆಗೂ ಚಂದನವದಲ್ಲಿ ಕಾಮಿಡಿ ಪಾತ್ರಗಳನ್ನೇ ನಿಭಾಯಿಸುತ್ತಾ ಬಂದಿರುವ ಚಿಕ್ಕಣ್ಣ ಇದೀಗ ‘ ಹೀರೋ’ ಆಗಿ ಮಿಂಚಲು ರೆಡಿಯಾಗಿದ್ದಾರೆ.

ನಿರ್ದೇಶಕ ಚಂದ್ರಮೋಹನ್ ಸಾರಥ್ಯದಲ್ಲಿ ” ಉಪಾಧ್ಯಕ್ಷ ” ಚಿತ್ರ ಮೂಡಿ ಬರುತ್ತಿದ್ದು , ರಾಬರ್ಟ್ , ಮದಗಜ ಚಿತ್ರಗಳಿಗೆ ಬಂಡವಾಳ ಹಾಕಿದ್ದ ಉಮಾಪತಿ ಯವರು ಇಲ್ಲೂ ಬಂಡವಾಳ ಹೂಡಲಿದ್ದಾರೆ.

ಮೊದಲ ಬಾರಿಗೆ ಸೋಲೋ ಹೀರೋ ಆಗಿ ಮಿಂಚಲು ಚಿಕ್ಕಣ್ಣ ಸಿದ್ದತೆ ನಡೆಸಿದ್ದು, ಚಿತ್ರ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು, ಭರಪೂರ್ತಿ ಮನೋರಂಜನೆಯಿಂದ ಕೂಡಿರಲಿದೆ ಎಂದು ಚಿಕ್ಕಣ್ಣ ಹೇಳಿಕೊಂಡಿದ್ದಾರೆ.

ಚಿಕ್ಕಣ್ಣ ಹೀರೋ ಆಗಿ ಲಾಂಛ್ ಆಗಲಿರುವ ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಸ್ಕ್ರಿಪ್ಟ್‌ ಪೂಜೆ ಮಾಡಿ , ರೆಕಾರ್ಡಿಂಗ್ ಆರಂಭಿಸುವ ಮೂಲಕ ಚಾಲನೆ ನೀಡಲಾಯಿತು.

ಇಷ್ಟು ದಿನಗಳವರೆಗೂ ಸಹನಟನಾಗಿ ಕಾಮಿಡಿ ಮೂಲಕ ಜನರ ಮನ ಮುಟ್ಟಿದ್ದ ಚಿಕ್ಕಣ್ಣ ಮುಂದೆ ನಾಯಕ ನಟನಾಗಿ ಚಂದನವದಲ್ಲಿ ಯಾವ ರೀತಿಯ ಕ್ರೇಜ್ ಸೃಷ್ಟಿಸಲಿದ್ದಾರೆ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments