ಬೆಂಗಳೂರು : ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಧಾರಾಕಾರಾ ಮಲೆಯಾಗುತ್ತಿದೆ. ಕೆಲವು ತಗ್ಗು ಪ್ರದೇಶಗಳಿಗಳಲ್ಲಿ ಮಳೆ ನೀರು ನಿಂತಿದ್ದು, ಅಲ್ಲಿನ ಜನರ ಜೀವನ ಸಂಕಷ್ಟದಲ್ಲಿದೆ. ಬನಶಂಕರಿಯ ಹೊಸಕೆರೆಹಳ್ಳಿಯಲ್ಲಿ ಮಳೆ ಬಂದಾಗೆಲ್ಲಾ ಅವಾಂತರ ಸೃಷ್ಟಿಯಾಗುತ್ತಲೆ ಇರುತ್ತದೆ. ನಿನ್ನೆ, ಮೊನ್ನೆ ಸುರಿದ ಮಳೆಗೆ ಮತ್ತೆ ಹೊಸಕೆರೆಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಯೆಲ್ಲಾ ಚರಂಡಿಯಾದಂತಾಗಿದೆ.

ಮಳೆಯಿಂದಾಗಿ ಚರಂಡಿ ನೀರೆಲ್ಲಾ ಮನೆಗಳ ಸಂಪ್ ಸೇರಿದೆ. ಹೀಗಾಗಿ ಕುಡಿಯುವ ನೀರಿಗೂ ಅಲ್ಲಿನ ಜನ ಕಷ್ಟಪಡುತ್ತಿದ್ದಾರೆ. ನಿನ್ನೆಯ ಮಳೆಗೆ ರಾಜಕಾಲುವೆ ಉಕ್ಕಿ ಹರಿದಿದ್ದು, ಅದರ ನೀರಲ್ಲಿ ಒಂದು ಮಾರುತಿ ಸುಜುಕಿ ಸ್ವಿಪ್ಟ್ ಕಾರು ತೇಲಿಕೊಂಡು ಹೋಗಿತ್ತು. ಆ ವಿಡಿಯೋ ನಿನ್ನೆ ಬಾರಿ ವೈರಲ್ ಆಗಿತ್ತು. ಇಂದು ಆ ಕಾರು ಸಿಕ್ಕಿದೆ. ರಭಸದ ನೀರಿಗೆ ಕಾರು ಕೊಚ್ಚಿಕೊಂಡು ಹೋಗಿ ಪಕ್ಕದ ರಸ್ತೆಗೆ ಸಿಲುಕಿತ್ತು. ಕಾರು ಸಿಕ್ಕಾಗ ಅದರಡಿ ಬೈಕ್ ಸಿಲುಕಿರುವುದು ಸಹ ತಿಳಿದು ಬಂದಿದೆ.
ಇಂದು ಕೂಡ ನಗರದಲ್ಲಿ ಮಳೆಯಾಗುವ ಸಾಧ್ಯತೆ ಜೋರಾಗಿದೆ. ದಸರಾ ಹಬ್ಬ ಕೂಡ ಇದ್ದು, ಹಬ್ಬದ ಸಂಭ್ರಮವಿಲ್ಲದೆ ಮನೆಗೆ ನುಗ್ಗಿದ ನೀರನ್ನ ಕ್ಲೀನ್ ಮಾಡುವಲ್ಲಿ ಸಮಯ ಕಳೆಯುವಂತಾಗಿದೆ ಇಲ್ಲಿನ ಜನ. ಆದ್ರೆ ಸಂಬಂಧ ಪಟ್ಟ ಅಧಿಕಾರಿಗಳು ಯಾರು ಸಹ ಸಮಸ್ಯೆ ಬಗೆ ಹರಿಸೋದಕ್ಕೆ ಮುಂದೆ ಬರುತ್ತಿಲ್ಲ ಎಂಬುದೇ ಜನರ ಗೋಳಾಟ.