Wednesday, October 27, 2021
No menu items!
Home Karnataka ಕರೆಂಟ್ ಶಾಕ್ ಬೆನ್ನಲ್ಲೇ, ವಾಟರ್ ಶಾಕ್ ನೀಡಲು ಮುಂದಾದ ಜಲಮಂಡಳಿ...!

ಕರೆಂಟ್ ಶಾಕ್ ಬೆನ್ನಲ್ಲೇ, ವಾಟರ್ ಶಾಕ್ ನೀಡಲು ಮುಂದಾದ ಜಲಮಂಡಳಿ…!

ಬೆಂಗಳೂರು : ಕೊರೋನಾ ಕಾಟದಿಂದ ಬೇಸತ್ತಿದ್ದ ನಗರದ ಜನತೆಗೆ ಇತ್ತೀಚೆಗಷ್ಟೇ ಬೆಸ್ಕಾಂ ಶಾಕ್ ನೀಡಿತ್ತು. ಪ್ರತಿ ಯೂನಿಟ್ ಗೆ 25 ಪೈಸೆ ದರ ಹೆಚ್ಚಳ ಮಾಡಿದ್ದ ಬೆಸ್ಕಾಂ ಬಳಿಕ ಇದೀಗ ಜಲಮಂಡಳಿ ಕೂಡಾ ಶಾಕ್ ನೀಡಲು ಅಣಿಯಾಗಿದೆ.

ಜಲಮಂಡಳಿ ಕಳೆದ ಜನವರಿಯಲ್ಲೇ ಶೇ 35ರಷ್ಟು ನೀರಿನ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದು ಜನಸಾಮಾನ್ಯರಿಗೆ ಹೊರೆಯಾಗುವುದರಿಂದ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಜಲಮಂಡಳಿ ಶೇ 15ರಷ್ಟು ದರವನ್ನ ಪರಿಷ್ಕೃರಿಸಿ ಪ್ರಸ್ತಾವನೆ ಸಲ್ಲಿಸಿತ್ತು.

ಇದೀಗ ವಿದ್ಯುತ್ ದರ ಏರಿಕೆ ಮಾಡಿರುವದರಿಂದ ನೀರಿನ ಬಿಲ್ ಕೂಡಾ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಜಲಮಂಡಳಿ ಪ್ರತಿ ತಿಂಗಳು 46 ಕೋಟಿ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದು ಇದರಿಂದ ಜಲಮಂಡಳಿಗೆ 10 ರಿಂದ 15 ಕೋಟಿ ನಷ್ಟವಾಗುತ್ತಿದೆ ಎಂದು ಜಲಮಂಡಳಿ ಹೇಳಿದೆ.

ಪ್ರಸ್ತುತ 8 ಸಾವಿರ ಲೀಟರ್ ನೀರು ಸಾಗಣೆಗೆ ಕಿ.ಮೀ ಗೆ 7 ರೂ. ದರ ಪಡೆಯುತ್ತಿದೆ. ಇದೀಗ ಜಲಮಂಡಲಿ ದರ ಪರಿಷ್ಕೃರಿಸುವಂತೆ , ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ವರದಿ ಸಲ್ಲಿಸಿದ್ದು ಯಾವಾಗಿನಿಂದ ಜಾರಿಯಾಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments