ಶಿಮ್ಲಾ: ಮನೆಯೊಡತಿಯೊಂದಿಗೆ ಸೇರಿ ಎಮ್ಮೆಯೂ ಡ್ಯಾನ್ಸ್ ಮಾಡಿದೆ. ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಹಿಮಾಚಲ ಪ್ರದೇಶದ ಗ್ರಾಮವೊಂದರಲ್ಲಿ ಈ ಎಮ್ಮೆ ಡ್ಯಾನ್ಸ್ ಮಾಡಿದೆ. ಎಮ್ಮೆ ಕಟ್ಟಿದ ಜಾಗದಲ್ಲಿ ಮನೆಯೊಡತಿ ಹೆಜ್ಜೆ ಹಾಕಿದ್ರೆ, ಎಮ್ಮೆ ತನ್ನ ಮಾಲಕಿಯನ್ನೇ ಫಾಲೋ ಮಾಡಿದೆ. ಅದು ಕೂಡ ಅವಳೊಟ್ಟಿಗೆ ಹೆಜ್ಜೆ ಹಾಕಿದೆ.
ಕೊಟ್ಟಿಗೆಯಲ್ಲಿ ಎಮ್ಮೆಯನ್ನು ಕಟ್ಟಿಹಾಕಲಾಗಿತ್ತು, ಅಲ್ಲದೆ ಅದರ ಮೇಲೆ ಕಂಬಳಿಯನ್ನು ಹೊದಿಸಲಾಗಿತ್ತು, ಹಾಡು ಹಾಕುತ್ತಿದ್ದಂತೆಯೇ ಎಮ್ಮೆ ನೃತ್ಯ ಮಾಡಲು ಆರಂಭಿಸಿತ್ತು. ಈ ವಿಡಿಯೋದಲ್ಲಿ ಸುತ್ತಮುತ್ತಲಿರುವ ಮಕ್ಕಳು ನಗುತ್ತಿರುವುದನ್ನು ಕೂಡ ಕೇಳುತ್ತದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮನುಷ್ಯ ಹಾಗೂ ಪ್ರಾಣಿ ನಡುವಿನ ಪ್ರೀತಿ ಎಂದರೆ ಹಾಗೆ. ಸ್ಪಂದನೆ-ಪ್ರತಿಸ್ಪಂದನೆ ಇದ್ದೇ ಇರುತ್ತದೆ. ಮನುಷ್ಯರು ಪ್ರೀತಿಸಿದರೆ ಅವುಗಳು ಕೂಡ ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತವೆ. ಹೊಡೆದರೆ ಬೇಸರ ಪಟ್ಟುಕೊಳ್ಳುತ್ತವೆ.
ವಿಡಿಯೋ ಕೃಪೆ: ಇಂಡಿಯಾ ಟುಡೇ
Watch a Buffalo dancing with its owner in a viral video! This undated viral video is believed to be shot in a one of the villages in #HimachalPradesh.#UserGeneratedContent | @manjeet_sehgal pic.twitter.com/DW9n4vTy9X
— IndiaToday (@IndiaToday) December 30, 2020