ದಾವಣಗೆರೆ: ಇನ್ನೇನು ಪ್ರಾಣ ಹೋಗೆ ಬಿಡಬೇಕು ಎನ್ನುವಷ್ಟರಲ್ಲಿ ಮಹಿಳೆಯನ್ನ ಜೀವಂತವಾಗಿರಿಸಿದ್ದು ಆ ಒಂದು ಚಾಕಲೇಟ್ ಆಸೆ. ಆಗಂತ ಆ ಮಹಿಳೆ ಆ ಚಾಕಲೇಟ್ ಅನ್ನು ತಿಂದು ಪ್ರಾಣ ಉಳಿಸಿಕೊಂಡರು ಅಂತಲ್ಲ. ಪುಟ್ಟ ಬಾಲಕನೊಬ್ಬನ ಚಾಕಲೇಟ್ ಆಸೆ ಇಂದು ಆ ಮಹಿಳೆಯ ಜೀವ ಉಳಿಸಿದೆ.
ಹೌದು ದಾವಣಗೆರೆಯ ಉತ್ತಮ್ ಚಂದ್ ಬಡಾವಣೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಕ್ಕನೊಂದಿಗೆ ಚಾಕಲೇಟ್ ತರಲು ಹೋದ ಬಾಲಕನಿಗೆ ಅಂಗಡಿ ಮಾಲಕಿ ನೇಣಿಗೆ ಶರಣಾಗಿದ್ದು ಕಂಡಿದೆ. ಸುಶಾಂತ್ ರೆಡ್ಡಿ ಹಾಗೂ ಆತನ ಅಕ್ಕ ಪ್ರಣೀತಾ ಆ ಮಹಿಳೆಯನ್ನ ಕಾಪಾಡಿದ್ದಾರೆ
ಪ್ರಣೀತಾ ರೆಡ್ಡಿ, ಸುಶಾಂತ ರೆಡ್ಡಿ
ಅಂಗಡಿಗೆ ಹೋಗಿದ್ದರು. ಆದ್ರೆ ಅಂಗಡಿಯಲ್ಲಿ ಯಾರು ಇರಲಿಲ್ಲ. ಎಷ್ಟೇ ಕೂಗಿದರೂ
ಬಾಗಿಲು ತೆರೆಯಲಿಲ್ಲ. ಮಧ್ಯಾಹ್ನ ಸಮಯ ಅಂಗಡಿಯವರು ಊಟಕ್ಕೆ ಒಳಗಿರಬಹುದೆಂದು ಕಾದಿದ್ದರು. ಬಳಿಕ ಬಾಲಕ ಸುಶಾಂತ ಮನೆ ಕಿಟಕಿಯಿಂದ ಇಣುಕಿ ನೋಡಿದಾಗ ಅಲ್ಲಿ ಅಂಗಡಿ ಮಾಲಕಿ ಕಿಟಕಿಗೆ ಟವಲು ಹಾಕಿಕೊಂಡು, ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರು. ಅವರ ಬಾಯಿಯಿಂದ ರಕ್ತ ಸುರಿಯುತ್ತಿದ್ದುದನ್ನು ಕಂಡು ತಕ್ಷಣವೇ ಜೋರಾಗಿ ಕೂಗಿದ್ದಾನೆ. ಮನೆಯೊಳಗೆ ಅಕ್ಕ ಪ್ರಣೀತಾ ಜೊತೆ ಹೋಗಿ ಮಹಿಳೆ ರಕ್ಷಣೆಗೆ ಮುಂದಾಗಿದ್ದಾನೆ. ನಂತರ ಅಕ್ಕಪಕ್ಕದ ಮನೆಯವರೆಲ್ಲ ಬಂದು ಮಹಿಳೆಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಆ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.